ವಿಜಯನಗರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ರಾಗಿಮಸಲವಾಡದ ರೇವಣ್ಣ

ವಿಜಯನಗರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ರಾಗಿಮಸಲವಾಡದ ರೇವಣ್ಣ

ಹರಪನಹಳ್ಳಿ, ಜ 16 – ವಿಜಯನಗರ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ರಾಗಿ ರಾಗಿಮಸಲವಾಡದ ಕೊಂಡಜ್ಜಿ ರೇವಣಸಿದ್ದಪ್ಪ ಆಯ್ಕೆಯಾಗಿದ್ದಾರೆ.ಉಳಿದಂತೆ ಉಪಾಧ್ಯಕ್ಷರಾಗಿ ಹೊಸಪೇಟೆ ಶ್ರೀನಿವಾಸ, ರಾಜ್ಯ ಪ್ರತಿನಿಧಿಯಾಗಿ ಕಕ್ಕುಪ್ಪಿ ಬಸವರಾಜ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಜಯನಗರ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೆಶಕರಾದ ಶರಣಪ್ಪ ಮುದಗಲ್ ತಿಳಿಸಿದ್ದಾರೆ. ಇವೇಳೆ ಕೊಟ್ಟೂರು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಗೇಶ್, ಹರಪನಹಳ್ಳಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಮಡಿವಾಳಪ್ಪ, ಕೂಡ್ಲಿಗಿ ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಿದ್ದನಗೌಡ, ಹಡಗಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೃಷ್ಣಪ್ಪ. ಹಗರಿ ಬೊಮ್ಮನಹಳ್ಳಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ದೇವರಾಜ ಹೊಸಪೇಟೆ, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಹುಲುಗಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ದೊಡ್ಡರಾಮಣ್ಣ, ಮುಖಂಡರಾದ ನಂದಿಹಳ್ಳಿ ಬಸವರಾಜಪ್ಪ, ನವೀನ್ ಪಾಟೀಲ್, ತೆಲಿಗಿ ಆರ್. ನಾಗರಾಜಪ್ಪ, ತುಂಬಿಗೇರಿ ದ್ಯಾಮನಗೌಡ್ರು, ಬೇವಿನಹಳ್ಳಿ ಕೆಂಚನಗೌಡ್ರು, ರಾಮಘಟ್ಟದ ನಾರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!