ಹರಿಹರ, ಜ.15- ಇದೇ 16 ಮತ್ತು 17 ರಂದು ನಗರದ ಮಹಾ ತಪಸ್ವಿ ಫೌಂಡೇಶನ್ ವತಿಯಿಂದ ಉಜ್ಜಯಿನಿ ಲಿಂ. ಶ್ರೀ ಸಿದ್ದಲಿಂಗ ಜಗದ್ಗುರುಗಳವರ ಲಿಂಗ ಬೆಳಕಿನ 89 ನೆಯ ಪುಣ್ಯಾರಾಧನೆಯ ಅಂಗವಾಗಿ ವಿಶೇಷ ಪೂಜೆ ಮತ್ತು ಧರ್ಮ ಸಮಾರಂಭ ನಡೆಯಲಿದೆ.
ಶುಕ್ರವಾರ ಬೆಳಿಗ್ಗೆ 11-30 ರಿಂದ ಧರ್ಮ ಸಮಾರಂಭ ಪ್ರಾರಂಭ ವಾಗಲಿದ್ದು, ಶ್ರೀ ಮಹಾ ತಪಸ್ವಿ ಫೌಂಡೇಶನ್ ಸಂಸ್ಥಾಪಕ ಅವಧೂತ ಕವಿ ಗುರುರಾಜ ಗುರೂಜಿ ಸಾನ್ನಿಧ್ಯ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಪಾಧ್ಯಕ್ಷ ಪ್ರೊ. ಸಿ. ವಿ. ಪಾಟೀಲ್ ವಹಿಸಲಿದ್ದು, ಶಾಸಕ ಬಿ. ಪಿ. ಹರೀಶ್ ಫೌಂಡೇಶನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ, ನಗರಸಭೆ ಉಪಾಧ್ಯಕ್ಷ ಎಂ. ಜಂಬಣ್ಣ. ನಿವೃತ್ತ ಪ್ರಾಚಾರ್ಯರಾದ ಶಕುಂತಲಮ್ಮ, ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಜಗದೀಶ್ ಬಣಕಾರ್, ನಗರಸಭೆ ಸದಸ್ಯರಾದ ಎ.ವಾಮನಮೂರ್ತಿ, ಎ.ಬಿ. ವಿಜಯಕುಮಾರ್ ಆಗಮಿಸುವರು. ಸಾಹಿತಿ ಪ್ರೊ. ಹೆಚ್. ಎ. ಭಿಕ್ಷಾವರ್ತಿಮಠ ಉಪನ್ಯಾಸ ನೀಡಲಿದ್ದಾರೆ.