ಮಲೇಬೆನ್ನೂರು, ಜ.15- ಸುಕ್ಷೇತ್ರ ನರಸೀಪುರದ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಬುಧವಾರ ಜರುಗಿದ ಅಂಬಿಗರ ಶರಣ ಸಂಸ್ಕೃತಿ ಉತ್ಸವ ಮತ್ತು ವಚನ ಗ್ರಂಥ ಮಹಾರಥೋತ್ಸವಕ್ಕೆ ಮಲೇಬೆನ್ನೂರು ಪಟ್ಟಣದಿಂದ 2 ಬಸ್‌ಗಳಲ್ಲಿ ನೂರಕ್ಕೂ ಹೆಚ್ಚು ಜನ ತೆರಳಿದ್ದರು.
ಗಂಗಾಮತ ಸಮಾಜದ ಅಧ್ಯಕ್ಷ ಕಡೇಮನೆ ಕುಮಾರ್, ಪುರಸಭೆ ಸದಸ್ಯ ಗೌಡ್ರ ಮಂಜಣ್ಣ, ಕಣ್ಣಾಳ್ ಹನುಮಂತಪ್ಪ, ಧರ್ಮಣ್ಣ, ಪೂಜಾರ್ ಚಿಕ್ಕಪ್ಪ, ಎನ್.ಎಂ.ಮಂಜುನಾಥ್, ಕುಂಬಳೂರಿನ ಎಂ.ಹೆಚ್.ರಮೇಶ್ ಮತ್ತಿತರರು ನೇತೃತ್ವ ವಹಿಸಿದ್ದರು.