ರಾಣೇಬೆನ್ನೂರು, ಜ. 12- ಕಾಂಗ್ರೆಸ್ ಸರ್ಕಾರ ಬಡವರು, ದೀನ ದಲಿತರು, ಹಿಂದುಳಿದವರ ಧ್ವನಿಯಾಗಿ ಕೆಲಸ ಮಾಡಲಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ತಾಲ್ಲೂಕಿನ ಚನ್ನಾಪುರ, ಉದಗಟ್ಟಿ, ಹೀಲದಹಳ್ಳಿ, ಹೊಳೆ ಆನ್ವೇರಿ ಸೇರಿದಂತೆ ಅನೇಕ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತಗಳಿಗೆ ಜನರು ಬೆಂಬಲಿಸಿದ್ದಾರೆ. ಇದನ್ನು ಸಹಿಸದ ವಿಪಕ್ಷಗಳು ಗ್ಯಾರಂಟಿ ಯೋಜನೆಗಳ ಬಗ್ಗೆ ಇಲ್ಲ ಸಲ್ಲದ ಆಪಾದನೆ ಮಾಡುತ್ತಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ಅನೇಕ ಅಭಿವೃದ್ಧಿ ಕಾರ್ಯಗಳೇ ಇದಕ್ಕೆ ಉತ್ತರ ಎಂದರು.
2023-24 ನೇ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅನುಷ್ಠಾನ ಮಾಡುತ್ತಿರುವ ಪ್ರಗತಿ ಕಾಲೋನಿ ಯೋಜನೆ ಅಡಿ ತಾಲೂಕಿನ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುವುದು ಎಂದರು.
ಗ್ರಾ.ಪಂ ಅಧ್ಯಕ್ಷೆ ಚಂದ್ರಕಲಾ ನಂದ್ಯಾಲ, ಉಪಾಧ್ಯಕ್ಷ ಗುಡ್ಡಪ್ಪ ಕರೂರ, ಸಮಾಜ ಕಲ್ಯಾಣ ಅಧಿಕಾರಿ ಮಾಲತೇಶ ಬಾರ್ಕಿ, ವಾಗೀಶ ಬಿ.ಬಿ ಶೆಟ್ಟರ್, ಪಿಡಿಓ ಹರೀಶ ಗೊಗ್ಗದ, ಮುಖಂಡರಾದ ಬಸಪ್ಪ ಶಿಡಗನಾಳ, ಕರಿಯಪ್ಪ ಆರೇರ, ಶಿಲ್ಪಾ ನಾಯಕ, ಹನುಮಂತಪ್ಪ ನಾಯಕ, ಜಯಪ್ಪ ಸೊಲಬಣ್ಣನವರ ಸೇರಿದಂತೆ ಅನೇಕರು ಇದ್ದರು.