ಮಲೇಬೆನ್ನೂರು, ಡಿ. 24- ಹರಳಹಳ್ಳಿ ಗ್ರಾ.ಪಂ. ಅಧ್ಯಕ್ಷರಾಗಿ ಗುಳದಹಳ್ಳಿಯ ಶ್ರೀಮತಿ ಲಕ್ಷ್ಮಿ ಎ.ಕೆ. ಮಂಜಪ್ಪ ಅವರು ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಎಇಇ ಬಿ.ಕೆ ಗಿರೀಶ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಹೆಚ್.ಎಂ. ಹನುಮಂತಪ್ಪ ಅವರ ರಾಜೀನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಉಪಾಧ್ಯಕ್ಷರಾದ ಶ್ರೀಮತಿ ಜಯಮ್ಮ, ಮಾಜಿ ಅಧ್ಯಕ್ಷ ಹೆಚ್.ಎಂ. ಹನುಮಂತಪ್ಪ, ಸದಸ್ಯರುಗಳಾದ ಶ್ರೀಮತಿ ಅನುಷಾ, ಕಾಂತಮ್ಮ, ರೂಪ, ದೇವಕಿ, ನಾಗಮ್ಮ, ಮೈತ್ರಮ್ಮ, ಚಂದ್ರಶೇಖರಚಾರಿ, ಸೋಮಶೇಖರಪ್ಪ, ಉಮೇಶ್ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಪಿ ಜೆ ಮಹಾಂತೇಶ್, ಮಲೇಬೆನ್ನೂರಿನ ಪಿ ಬಿ ದೇವರಾಜ್ ಮತ್ತು ಪಿಡಿಒ ಶಾಂತಪ್ಪ ಹಾಗೂ ಹರಳಹಳ್ಳಿ, ಮಲ್ಲನಾಯಕನಹಳ್ಳಿ, ಗುಳದಹಳ್ಳಿ, ಸಂಕ್ಲಿಪುರ ಗ್ರಾಮಗಳ ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.