ಬಾತಿ ಕೆರೆ ಏರಿ ನಿರ್ಮಾಣ, ಪಿಜಿಂಗ್ ಕಾಮಗಾರಿ

ಬಾತಿ ಕೆರೆ ಏರಿ ನಿರ್ಮಾಣ, ಪಿಜಿಂಗ್ ಕಾಮಗಾರಿ

ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ಗಣೇಶ್ ಹುಲ್ಲುಮನಿ ಪರಿಶೀಲನೆ

ದಾವಣಗೆರೆ, ಡಿ. 10 – ಮಹಾನಗರ ಪಾಲಿಕೆ ವ್ಯಾಪ್ತಿಯ ಕುಂದುವಾಡ ಸರ್ವೇ ನಂಬರ್ 169 ರಿಂದ ಕುಂದವಾಡ ಎಸ್‌ಟಿಪಿ ವರೆಗಿನ  ಬಾತಿ ಕೆರೆ ಮಣ್ಣಿನ ಏರಿ ನಿರ್ಮಾಣ ಮತ್ತು ಪಿಜಿಂಗ್ ಕಾಮಗಾರಿಯನ್ನು  ಶ್ರೀಮತಿ ಸವಿತಾ ಗಣೇಶ್ ಹುಲ್ಲುಮನಿ, ಅಧ್ಯಕ್ಷರು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ, ಇವರು ಸ್ಥಳಕ್ಕೆ ಭೇಟಿ ನೀಡಿ ಸದರಿ ಕಾಮಗಾರಿಯು  ಬಾತಿ ಕೆರೆಗೆ ಸೇರುತ್ತಿರುವ ಕಲುಷಿತ ನೀರನ್ನು ತಡೆಯುವುದು ಹಾಗೂ ಎನ್‌ಜಿಟಿ (ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್) ರವರ ಮಾರ್ಗ ಸೂಚಿಯಂತೆ ಕೆರೆ ನಿರ್ವಹಣೆ ಮಾಡಿದಂತಾಗುತ್ತದೆ ಹಾಗೂ ಮುಂಬರುವ ದಿನಗಳಲ್ಲಿ ಶುದ್ಧೀಕರಿಸಿದ ನೀರನ್ನು ಕೃಷಿ ಚಟುವಟಿಕೆಗೆ ಬಳಸಲು ಯೋಜನೆ ರೂಪಿಸಲಾಗಿರುತ್ತದೆ.

ಕಾರಣ ಕಾಲಾವಧಿಯೊಳಗೆ ಕಾಮಗಾರಿ ಪೂರ್ಣ ಗೊಳಿಸಲು ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು ಹಾಗೂ ಕಾಮಗಾರಿಯನ್ನು ಪರಿಶೀಲಿಸಿ ಗುಣಮಟ್ಟ ಕಾಪಾಡುವ ಜೊತೆಗೆ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

error: Content is protected !!