ಹರಿಹರದ ಕೌನ್ಸಿಲರ್ ಮೇಲಿನ ಹಲ್ಲೆ ಆರೋಪ ; ಸೊಸೈಟಿ ಮಾಲೀಕರ ಸ್ಪಷ್ಟನೆ

ಹರಿಹರದ ಕೌನ್ಸಿಲರ್ ಮೇಲಿನ ಹಲ್ಲೆ ಆರೋಪ ; ಸೊಸೈಟಿ ಮಾಲೀಕರ ಸ್ಪಷ್ಟನೆ

ಹರಿಹರ, ನ. 28- ನಗರಸಭೆ ಸದಸ್ಯ ಆಟೋ ಎ.ಕೆ. ಹನುಮಂತಪ್ಪ ಅವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ, ಅವರೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು  ಸೊಸೈಟಿ ಮಾಲೀಕ ಡಿ. ಹನುಮಂತಪ್ಪ ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಮಗೆ ಸಂಬಂಧ ಇಲ್ಲದೆ ನಮ್ಮ ಮನೆಯ ಎದುರು ನಿಂತಿದ್ದ ವಾಹನಗಳಲ್ಲಿ ಇದ್ದ ರಾಗಿ, ಅಕ್ಕಿ ದಾಸ್ತಾನು ನೋಡಿ ನಮ್ಮ ಮೇಲೆ ಜಗಳಕ್ಕೆ ಮುಂದಾಗಿದ್ದು, ಅಲ್ಲದೇ, ಕೆಲವು ಮಾಧ್ಯಮದವರಿಗೆ ಇದೇ ಸೊಸೈಟಿ ದಾಸ್ತಾನು ಎಂದು ಹೇಳಿಕೆಯನ್ನು ನೀಡುವುದಕ್ಕೆ ಮುಂದಾದಾಗ ತಮಗೂ ಮತ್ತು ಕೌನ್ಸಿಲರ್ ಹನುಮಂತಪ್ಪ ನಡುವೆ ವಾಕ್ ಸಮರ ಆಯಿತು  ಎಂದು ಹೇಳಿದರು.

ನಗರಸಭೆ ಸದಸ್ಯ ರಜನಿಕಾಂತ್, ದಲಿತ ಸಮುದಾಯದ ಮುಖಂಡರಾದ ನಾಗಭೂಷಣ, ಜಿ.ವಿ. ವೀರೇಶ್, ಹೆಚ್.ಎಸ್.ಕೊಟ್ರೇಶ್ ಮಾತನಾಡಿ, ಕೌನ್ಸಿಲರ್  ಮೇಲಿನ ಹಲ್ಲೆ ಪ್ರಕರಣವನ್ನು ಅಲ್ಲಗಳೆದರು.  ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಪಿ.ಎನ್. ವಿರುಪಾಕ್ಷಪ್ಪ, ಕಾಂಗ್ರೆಸ್ ಮುಖಂಡರಾದ ಸಂತೋಷ ನೋಟದರ್, ವಿಜಯಕುಮಾರ್, ಪೈ. ಹನುಮಂತಪ್ಪ, ಬಿಜೆಪಿ ಮುಖಂಡ  ವೈ.ವಿ. ಪ್ರಭಾಕರ್, ಇಟಗಿ ಗುರು, ಕೃಷ್ಣಪ್ಪ ಇತರರು ಉಪಸ್ಥಿತರಿದ್ದರು.  

error: Content is protected !!