ಹಲವಾಗಲು ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಪಿ ಲತಾ ಅಭಿಮತ
ಹರಪನಹಳ್ಳಿ, ನ.26- ಕನಕದಾಸರು ದಾಸ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.
ಅವರು ತಾಲ್ಲೂಕಿನ ಹಲುವಾಗಲು ಗ್ರಾಮದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ಕನಕದಾಸರ 537ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸಾಹಿತ್ಯದ ಮೂಲಕ ಜನ ಜಾಗೃತಿ ಮೂಡಿಸಿ ದವರಲ್ಲಿ ಕನಕದಾಸರು ಮತ್ತು ಪುರಂದರದಾಸರು ಪ್ರಮು ಖರು. ಇವರನ್ನು ದಾಸ ಸಾಹಿತ್ಯದ ಅಶ್ವಿನಿ ದೇವತೆಗಳು ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ವಿಜಯನಗರ ಸಾಮ್ರಾಜ್ಯದ ಸೇನಾಧಿಪತಿಯಾಗಿದ್ದ ತಂದೆ ಬೀರಪ್ಪ ನಾಯಕನ ಮರಣದ ನಂತರ ಕನಕದಾಸರು ಸೇನಾಧಿಪತಿಯಾಗಿ ಉತ್ತಮ ಆಡಳಿತ ನಡೆಸಿ ಬಳಿಕ ಭಕ್ತಿ ಪಂಥದ ಕಡೆಗೆ ವಾಲಿದರು, ಶ್ರೀಕೃಷ್ಣನ ಭಕ್ತರಾಗಿದ್ದ ಕನಕರು ಕೃಷ್ಣನನ್ನು ನೆನೆದು ಉಡುಪಿಯ ಮಠಕ್ಕೆ ತೆರಳುತ್ತಾರೆ. ಅಲ್ಲಿ ಶ್ರೀಕೃಷ್ಣ ಗೋಡೆಯಿಂದಲೇ ದರ್ಶನ ನೀಡುತ್ತಾನೆ ಎಂದು ಹೇಳಿದರು.
ವಾಲ್ಮೀಕಿ ಸಮಾಜದ ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಎಚ್.ಟಿ.ವನಜಾಕ್ಷಿ ಮಾತನಾಡಿ, ಕನಕದಾಸರು ಜಾತಿ ವ್ಯವಸ್ಥೆಯನ್ನು ವಿರೋಧಿಸಿದ್ದರು, ಸಮ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಅವರ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.
ಯುವ ಮುಖಂಡ ದಾದಾಪುರ ಸುನೀಲ್ ಮಾತನಾಡಿ, ಪ್ರತಿ ವರ್ಷ ಕನಕದಾಸರ ಜಯಂತಿಯನ್ನು ನಮ್ಮ ಗ್ರಾಮದಲ್ಲಿ ಸರ್ವ ಜನಾಂಗದವರು ಸೇರಿ ಪ್ರೀತಿ, ವಿಶ್ವಾಸದಿಂದ ಆಚರಿಸುತ್ತಾ ಬಂದಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸರಿತಾ, ಹರಪನಹಳ್ಳಿ ಪುರಸಭೆ ಸದಸ್ಯ ಉದ್ದಾರ ಗಣೇಶ, ಮುಖಂಡರಾದ ಗಿರೀಶಪ್ಪ, ದನಕವರ್ ಸೋಮಲಿಂಗಪ್ಪ, ಶಿವಪ್ಪ, ಭೋವಿ ವೆಂಕಟೇಶ, ಸಂಗವ್ವನವರ ನಿಂಗಜ್ಜ, ಮತ್ತೂರು ಬಸವರಾಜ, ಪ್ರಭು, ಮಂಜುನಾಥ, ದಾದಾಪುರ ಶಿವಪುತ್ರ, ಎಚ್.ಟಿ.ಹನುಮಂತ, ಕಲ್ಲೇರ ನಾಗರಾಜ, ಕರಿಯಪ್ಪ, ರಮೇಶ್, ವೀರಭದ್ರಪ್ಪ, ಪಾರ್ವತಮ್ಮ, ಸೈಯದ್ ಇರ್ಫಾನ್ ಸೇರಿದಂತೆ ಇತರರು ಇದ್ದರು.