ಶಾಸಕ ಟಿ. ರಘುಮೂರ್ತಿ
ಚಳ್ಳಕೆರೆ, ನ. 6- ಕನ್ನಡ ಭಾಷೆ ನಮ್ಮೆಲ್ಲರ ಆಡಳಿತ ಭಾಷೆ. ಕನ್ನಡ ಮತ್ತು ನಾಡು ನುಡಿ ಕನ್ನಡತನ ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದು ಶಾಸಕ ಟಿ. ರಘುಮೂರ್ತಿ ತಿಳಿಸಿದರು.
ಇಲ್ಲಿನ ಬಿ.ಎಂ. ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜ್ಞಾನಪೀಠ ಪಡೆದ ಎಲ್ಲಾ ಸಾಹಿತಿಗಳು ಕನ್ನಡ ಮಣ್ಣಿನಲ್ಲಿ ಹುಟ್ಟಿ ಬೆಳೆದು, ನಮ್ಮ ಕನ್ನಡಕ್ಕೆ ಕೀರ್ತಿ ತಂದಿದ್ದಾರೆ ಎಂದು ತಿಳಿಸುತ್ತಾ, ಅತಿ ಶೀಘ್ರದಲ್ಲಿ ಕನ್ನಡಿಗರಿಗೆ ಕನ್ನಡ ಭವನ ನಿರ್ಮಿಸುವುದಾಗಿ ಹೇಳಿದರು
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜೈತುಂಬಿ, ಉಪಾಧ್ಯಕ್ಷರಾದ ಪಾಲಮ್ಮ ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ. ವೀರಭದ್ರಯ್ಯ, ತಹಶೀಲ್ದಾರ್ ರೆಹಾನ್ ಪಾಶಾ, ನಗರಸಭೆ ಆಯುಕ್ತ ಜಗ್ಗುರೆಡ್ಡಿ, ಗ್ಯಾರಂಟಿ ಯೋಜನೆ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ಎಸ್.ಹೆಚ್. ಸೈಯದ್, ಸಿದ್ದಾಪುರ ಶೇಖರ್, ನಾಮ ನಿರ್ದೇಶನ ಸದಸ್ಯರುಗಳಾದ ಹಳೇ ಟೌನ್ ವೀರಭದ್ರ, ಪಾಪಣ್ಣ, ಡಿ.ಕೆ. ಅನ್ವರ್, ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಿ. ಬೋರಯ್ಯ, ವಿ. ಶಿವನಪ್ಪ (ಸಾಂಸ್ಕೃತಿಕ ಕ್ಷೇತ್ರ), ಸಿ.ವೈ. ಗಂಗಾಧರ (ಮಾಧ್ಯಮ ಕ್ಷೇತ್ರ – ಜನತಾವಾಣಿ ವರದಿಗಾರ), ನಿವೃತ್ತ ಶಿಕ್ಷಕ ಗುರುಮೂರ್ತಿ, ಕೃಷಿ ಕೇತ್ರದಲ್ಲಿ ಪಗಡಲ ಬಂಡೆ ಸಿದ್ದೇಶ್ವರ ರೆಡ್ಡಿ, ಕಂದಾಯ ಇಲಾಖೆಯ ರಾಜ್ಯ ನಿರೀಕ್ಷಕ ಚೇತನ್ಕುಮಾರ್, ಕ್ರೀಡಾ ಕ್ಷೇತ್ರ ಪದ್ಮಾವತಿ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.