ಮಾನ್ಯರೇ,
ತುಮಕೂರು ಜಿಲ್ಲೆಯ ಮಂದಾರಗಿರಿ ಬೆಟ್ಟದ, ಮೈದಾಳೆ ಕೆರೆ ಕೋಡಿಯಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ಜಾರಿ ಬಿದ್ದ ಯುವತಿ 22 ಗಂಟೆಗಳ ಕಾಲ ಜೀವನ್ಮರಣ ಏಕಾಂಗಿ ಹೋರಾಟದ ನಂತರ ಅಗ್ನಿಶಾಮಕ ಮತ್ತು ಪೊಲೀಸ್ ರಕ್ಷಣಾ ಕಾರ್ಯಾಚರಣೆಯಿಂದ ಸಾವನ್ನೇ ಗೆದ್ದು ಬಂದಿದ್ದಾಳೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳೆಂಬ ವ್ಯಾಮೋಹಕ್ಕೆ ಬಿದ್ದ ಹದಿ ಹರೆಯದವರು ಲಂಗು ಲಗಾಮಿಲ್ಲದೆ, ಸ್ವ-ನಿಯಂತ್ರಣವನ್ನೇ ಕಳೆದುಕೊಂಡು, ಅಪಾಯಕಾರಿ ಸ್ಥಳವೆನ್ನದೆ, ಸಾವನ್ನೂ ಲೆಕ್ಕಿಸದೆ ಫೋಟೋ ಗೀಳಿಗೆ ಬಿದ್ದಿರುವುದು ನಿಜಕ್ಕೂ ದುರಂತ. ಇದಕ್ಕೆಲ್ಲ ಕಾರಣ ಅತಿಯಾದ ಮೊಬೈಲ್ ಗೀಳು. ಸೆಲ್ಫಿ, ರೀಲ್ಸ್ ನಂತಹ ಹುಚ್ಚಾಟಕ್ಕೆ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಮಕ್ಕಳ ಬಗ್ಗೆ ಪೋಷಕರು ಸ್ವಲ್ಪ ಎಚ್ಚರ ವಹಿಸಬೇಕಾಗಿದೆ. ಕೆಲವು ಪ್ರಕರಣಗಳಲ್ಲಿ ಇಂತಹ ಹುಚ್ಚಾಟಕ್ಕೆ ಜೀವಗಳೇ ಹೋಗಿವೆ. ಎಲ್ಲದಕ್ಕೂ ಮಿತಿ ಇದೆ. ಈಗಿನ ಆಧುನಿಕ ಜೀವನ ಶೈಲಿಗೆ ಯಾವುದೂ ಅತಿಯಾಗಬಾರದು. ಅತಿಯಾದರೆ ಅಮೃತವೂ ವಿಷವಲ್ಲವೇ.?
-ಮುರುಗೇಶ ಡಿ, ದಾವಣಗೆರೆ.