ಹರಪನಹಳ್ಳಿ ಒಳಮೀಸಲು ಸೌಲಭ್ಯಕ್ಕಾಗಿ ಪ್ರತಿಭಟನೆ

ಹರಪನಹಳ್ಳಿ ಒಳಮೀಸಲು ಸೌಲಭ್ಯಕ್ಕಾಗಿ ಪ್ರತಿಭಟನೆ

ಹರಪನಹಳ್ಳಿ, ಅ. 28 – ನ್ಯಾ.ಎ.ಜೆ. ಸದಾಶಿವ ಆಯೋಗದ ವರದಿ ಯತಾವತ್ತು ಜಾರಿಗೊಳಿಸಿ ನೊಂದ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಸಿದರು. 

 ಪಟ್ಟಣದ ಹಿರೆಕೆರೆ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ತಮಟೆಗಳ ಸದ್ದು ಮಾಡುತ್ತಾ ಆರಂಭಿಸಿದ ಪ್ರತಿಭಟನೆ ಮೆರವಣಿಗೆ ಇಜಾರಿ ಶಿರಸಪ್ಪ ವೃತ್ತ, ಜೆಸಿಐ ಸರ್ಕಲ್, ಹಳೇ ಬಸ್ ನಿಲ್ದಾಣ ವೃತ್ರ, ಪ್ರವಾಸಿ ಮಂದಿರ ವೃತ್ತ ತಲುಪಿ ಬಹಿರಂಗ ಸಭೆ ನಡೆಸಿ ತಹಶೀಲ್ದಾರ್‌ ಬಿ.ವಿ. ಗಿರೀಶ್ ಬಾಬು ಅವರ ಮೂಲಕ ಮುಖ್ಯಮಂತ್ರಿ, ರಾಜ್ಯಪಾಲರಿಗೆ ಮನವಿ ರವಾನಿಸಿದರು. 

ಅಸ್ಪೃಶ್ಯತೆಯಿಂದ ಆಗಿರುವ ಅನ್ಯಾಯ ಹಾಗೂ ಅವಮಾನವನ್ನು ಸರಿದೂಗಿಸಲು ಮೀಸಲಾತಿ ಸವಲತ್ತು ಸಂವಿಧಾನಾತ್ಮಕವಾಗಿ ನೀಡಲಾಗಿದೆ. ಈ ಪಟ್ಟಿಯಲ್ಲಿ ಸ್ಪೃಶ್ಯ ಜಾತಿಗಳನ್ನು ಸೇರಿಸಿದ್ದು ಮೀಸಲಾತಿ ನೀತಿಗೆ ಮಾರಕವಾಗಿ ಪರಿಣಮಿಸಿದೆ. ಒಳಮೀಸಲಾತಿ ಸೌಲಭ್ಯದಿಂದ ಮಾತ್ರವೇ ಈ ಅಸಮಾನತೆ ನಿವಾರಿಸಲು ಸಾಧ್ಯ ಎಂದು ಪ್ರತಿಭಟನಾಕಾರರು ಹಕ್ಕೊತ್ತಾಯ ಮಂಡಿಸಿದರು. 

ಮುಖಂಡರಾದ ನಿಚ್ಚವ್ವನಹಳ್ಳಿ ಭೀಮಪ್ಪ, ಪ್ರೊ.ಟಿ. ರಾಜಪ್ಪ, ಹಲಗೇರಿ ಮಂಜಪ್ಪ, ಹುಲಿಕಟ್ಟೆ ಚಂದ್ರಪ್ಪ, ಒ. ರಾಮಪ್ಪ, ಕಣಿವಿಹಳ್ಳಿ ಮಂಜುನಾಥ, ಮೈದೂರು ರಾಮಪ್ಪ, ಸುಭಾಷ್, ಗುಂಡಗತ್ತಿ ಕೊಟ್ರಪ್ಪ, ಸಿ. ಪ್ರತಾಪ್, ಕಬ್ಬಳ್ಳಿ ಮೈಲಪ್ಪ, ಕೆ.ಡಿ. ಮರಿಯಪ್ಪ, ಹಲವಾಗಲು ರಮೇಶ್, ಚಂದ್ರಪ್ಪ ಕಂಚಿಕೇರಿ, ಒ. ಮಹಾಂತೇಶ್, ಕೊಂಗನ ಹೊಸೂರು ಶಿವಣ್ಣ, ಎಚ್.ಎಂ. ಜುಂಜಪ್ಪ, ಕಬ್ಬಳ್ಳಿ ಪರಸಪ್ಪ, ಗುರುಮೂರ್ತಿ, ಛಲವಾದಿ ಬಸವರಾಜ್ ಮಾತನಾಡಿದರು. 

ಮುಖಂಡ ತೆಲಿಗಿ ಹನುಮಂತಪ್ಪ, ಅರಸಿಕೆರೆ ಮರಿಯಪ್ಪ,  ಶೃಂಗಾರತೋಟ ನಿಂಗರಾಜ್, ಪ್ರಶಾಂತ್, ನಾಗರಾಜ್, ಕಬ್ಬಳ್ಳಿ ಹನುಮಂತಪ್ಪ, ರಾಜಪ್ಪ, ಪ್ರಭಾಕರ, ನಾಗರಾಜ್ ಯರಬಾಳು, ಮತ್ತಿಹಳ್ಳಿ ಕೆಂಚಪ್ಪ, ಯಗ್ಗೇರಿ ರಂಗಪ್ಪ, ದ್ವಾರಕೇಶ್, ಎಂ.ಎಸ್. ಪಕ್ಕೀರಪ್ಪ, ಪ್ರಭಾಕರ, ನಾಗಪ್ಪ ಕಾನಹಳ್ಳಿ, ಓಮಣ್ಣ, ಗೌರಿಹಳ್ಳಿ ಹುಚ್ಚಪ್ಪ, ಬಾಗಳಿ ಸುಭಾಷ್, ಚಂದ್ರಪ್ಪ ಇತರರಿದ್ದರು. 

error: Content is protected !!