ನಾಗರಿಕರ ರಕ್ಷಣೆಗೆ, ಶಾಂತಿ ಸುವ್ಯವಸ್ಥೆಗೆ ನಗರದಲ್ಲಿ ಪೊಲೀಸ್ ಠಾಣೆಗಳು ಅವಶ್ಯಕ

ಮಾನ್ಯರೇ, 

ದಾವಣಗೆರೆ 20 ವರ್ಷದ ಕೆಳಗಿನಂತೆ ಇರುವುದಿಲ್ಲ, 20 ವರ್ಷಕ್ಕೆ ಹೋಲಿಸಿದಲ್ಲಿ ಜನಸಂಖ್ಯೆಯಲ್ಲಿ ಹೆಚ್ಚಳ ಹೊಂದಿರುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಹೊಸ ಹೊಸ ಬಡಾವಣೆಗಳೂ ಸಹ ನಿರ್ಮಾಣಗೊಂಡು ನಗರವು ಶರವೇಗದಲ್ಲಿ ಬೆಳೆಯುತ್ತಿದೆ. ಹಾಗೆ ದಾವಣಗೆರೆ ನಗರಕ್ಕೆ ವಿದ್ಯಾಭ್ಯಾಸ, ಉದ್ಯೋಗ, ವೃತ್ತಿಗಳನ್ನು ಅರಸಿ ಬರುವವರ ಸಂಖ್ಯೆಯುೂ ಸಹ ಹೆಚ್ಚಿರುತ್ತದೆ.

 ಜನಸಂಖ್ಯೆ ಹೆಚ್ಚಾದಂತೆ ಬಡಾವಣೆಗಳು ಹೆಚ್ಚಾಗಿರುವುದು, ನಗರ ಪ್ರದೇಶ ಹೊರವಲಯದಲ್ಲೂ ಸಹ ಬಡಾವಣೆಗಳು ತಲೆ ಎತ್ತುತ್ತಿವೆ. ಆದರೆ  ನಗರದಲ್ಲಿ ಜನಸಂಖ್ಯೆಗೆ, ಬಡಾವಣೆಗಳಿಗೆ ಅನುಗುಣವಾಗಿ ನಾಗರಿಕರ ರಕ್ಷಣೆಗೆ,ಭದ್ರತೆಗೆ, ಶಾಂತಿ ಸುವ್ಯವಸ್ಥೆಗೆ ನಗರದಲ್ಲಿ ಇನ್ನು ಹೆಚ್ಚಿನ ಪೊಲೀಸ್ ಠಾಣೆಗಳು ಅವಶ್ಯಕವಾಗಿ ಬೇಕಾಗಿರುತ್ತವೆ.

ಜನಸಂಖ್ಯೆ ಹೆಚ್ಚಳವಾದಂತೆ ಸಂಚಾರದಲ್ಲೂ ಸಹ ಅಡೆತಡೆಗಳು ಸೃಷ್ಟಿಯಾಗುತ್ತವೆ. ಈಗಿರುವ  ಸಂಚಾರಿ ಪೊಲೀಸ್ ಸಿಬ್ಬಂದಿ ಕೊರತೆಯನ್ನು ನೀಗಿಸಿ ಉತ್ತಮ ಸುಗಮ ಸಂಚಾರ ವ್ಯವಸ್ಥೆಯನ್ನು ನೀಡಲು ಹೆಚ್ಚುವರಿಯಾಗಿ ಸಂಚಾರ ಪೊಲೀಸ್ ಠಾಣೆ ಸಹ ಅವಶ್ಯಕವಾಗಿದೆ.

 ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ನಿಯಮಾನುಸಾರ  ಕ್ರಮ ತೆಗೆದುಕೊಳ್ಳಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇವೆ.

– ರಾಘವೇಂದ್ರ ಶೆಟ್ಟಿ ಬಿ.ಎಸ್., ವಕೀಲರು, ದಾವಣಗೆರೆ.

error: Content is protected !!