ಗಾಂಧೀಜಿ ಜಯಂತಿ : ಬಾಪೂಜಿ ಪ್ರಬಂಧ ಸ್ಪರ್ಧೆ

ಗಾಂಧೀಜಿ ಜಯಂತಿ : ಬಾಪೂಜಿ ಪ್ರಬಂಧ ಸ್ಪರ್ಧೆ

ದಾವಣಗೆರೆ, ಸೆ. 30 – ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗಾಂಧೀಜಿಯವರ 155ನೇ ಜಯಂತಿ ಅಂಗವಾಗಿ ಪ್ರೌಢಶಾಲಾ, ಪದವಿ ಪೂರ್ವ ಹಾಗೂ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ `ಬಾಪೂಜಿ’ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. 

ವಿಜೇತರಿಗೆ ನಾಡಿದ್ದು ದಿನಾಂಕ 2 ರಂದು ಬೆಳಿಗ್ಗೆ 9ಕ್ಕೆ ರಾಮನಗರದಲ್ಲಿನ ಗಾಂಧಿ ಭವನದಲ್ಲಿ ನಡೆಯುವ ಗಾಂಧಿ ಜಯಂತಿಯಂದು ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ. 

ಇಂದಿನ ಯುವ ಪೀಳಿಗೆಯಲ್ಲಿ ಗಾಂಧಿ ವಿಚಾರ ಧಾರೆಗಳು ಹಾಗೂ ಚಿಂತನೆಗಳನ್ನು ಬೆಳೆಸುವುದು ಪ್ರಬಂಧ ಸ್ಪರ್ಧೆಯ ಉದ್ದೇಶವಾಗಿದ್ದು, ವಿಜೇತರಿಗೆ ನಗದು ಬಹುಮಾನವಾಗಿ ಪ್ರಥಮ ರೂ. 3000, ದ್ವಿತೀಯ ರೂ. 2000 ಹಾಗೂ ತೃತೀಯ ರೂ. 1000 ನಗದು ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ. 

ವಿಜೇತರ ವಿವರ ; ಪ್ರೌಢ ಶಾಲಾ ವಿಭಾಗ, ದಾವಣಗೆರೆ ತಾ. ಮೆಳ್ಳೇಕಟ್ಟೆ ಸರ್ಕಾರಿ ಪ್ರೌಢಶಾಲೆ 10ನೇ ತರಗತಿ ಧನುಷ್ ಬಿ.ಎನ್. ಪ್ರಥಮ, ಜಗಳೂರು ತಾ. ದೊಣೆಹಳ್ಳಿ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿಯ ಕೆ.ಆರ್. ಕಾವ್ಯ ದ್ವಿತೀಯ, ದಾವಣಗೆರೆ ತಾ. ಕಬ್ಬೂರು ಸರ್ಕಾರಿ ಪ್ರೌಢ ಶಾಲೆ 10ನೇ ತರಗತಿ ಬಿಂದುಶ್ರೀ ತೃತೀಯ ಸ್ಥಾನ ಪಡೆದಿದ್ದಾರೆ. 

 ಪದವಿ ಪೂರ್ವ ಶಿಕ್ಷಣ ವಿಭಾಗ; ದಾವಣಗೆರೆ ಅಂಜುಂ ಸಂಯುಕ್ತ
ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದ ಪ್ರಥಮ ಪಿಯುಸಿ ಕೈಫಿಯಾ ಮಸ್ರೂರ್ ಪ್ರಥಮ, ಇದೇ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದ ರಬಿಯಾ ಬಸ್ರಿ ದ್ವಿತೀಯ, ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿ.ಯು.ಸಿ.ಯ ಗುರುಕೀರ್ತಿ ಎಂ.ಹೆಚ್. ತೃತೀಯ ಸ್ಥಾನ ಪಡೆದಿದ್ದಾರೆ. 

ಪದವಿ ವಿಭಾಗ; ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ತೃತೀಯ ಬಿ.ಕಾಂ. ಹನುಮಂತ ನಾಯಕ್ ಡಿ. ಪ್ರಥಮ, ತೃತೀಯ ಬಿ.ಎಸ್ಸಿ ವಿನುತ ಎಂ. ದ್ವಿತೀಯ, ಬಿ.ಎ.ಕೆ. ಸುದೀಪ್ ತೃತೀಯ ಸ್ಥಾನ ಪಡೆದಿದ್ದಾರೆ.

error: Content is protected !!