ದಾವಣಗೆರೆ, ಸೆ.3- ರಾಜ್ಯದಲ್ಲಿರುವ 40 ಸಾವಿರ ಪತ್ರಿಕಾ ವಿತರಕರಿಗೆ ಸರ್ಕಾರ ಸೂಕ್ತ ನೆರವು ಕಲ್ಪಿಸಬೇಕಿದೆ ಎಂದು ಹಿರಿಯ ಪತ್ರಿಕಾ ವಿತರಕ ಕೃಷ್ಣಮೂರ್ತಿ ಆಗ್ರಹಿಸಿದ್ದಾರೆ.
ಪ್ರಸ್ತುತ ದಿನಮಾನಗಳಲ್ಲಿ ಪತ್ರಿಕಾ ವಿತರಕರ ಕುಟುಂಬಗಳು ಬಡತನದಲ್ಲಿ ಜೀವನ ನಡೆಸುತ್ತಿವೆ. ನಿತ್ಯವೂ ಕತ್ತಲು, ಗಾಳಿ, ಮಳೆಯನ್ನು ಲೆಕ್ಕಿಸದೇ ಸಮಾಜಕ್ಕೆ ನಿಸ್ವಾರ್ಥದಿಂದ ಸುದ್ದಿ ತಲುಪಿಸುವ ಕಾರ್ಯಕ್ಕೆ ನ್ಯಾಯ ಸಿಗಬೇಕಿದೆ.
ಪತ್ರಿಕಾ ವಿತರಕರ ಹಿತ ಕಾಪಾಡಲು ಸರ್ಕಾರವು 10 ಕೋಟಿ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ಜತೆಗೆ ಉಚಿತವಾಗಿ ಎಲೆಕ್ಟ್ರಿಕ್ ಬೈಕ್ ನೀಡುವಂತೆ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ವಿತರಕರಿಗೆ ಪತ್ರಿಕೆ ವಿಂಗಡಿಸುವುದಕ್ಕೆ ಸೂಕ್ತ ಜಾಗವಿಲ್ಲ ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಪರಿಹಾರ ಸೂಚಿಸ ಬೇಕೆಂದು ಮನವಿ ಮಾಡಿದ್ದಾರೆ.