ಬಂಡವಾಳ ಶಾಹಿಗಳಿಂದ ಸಿರಿಗೆರೆ ಮಠದ ಬಗ್ಗೆ ಅಪ ಪ್ರಚಾರ

ಬಂಡವಾಳ ಶಾಹಿಗಳಿಂದ ಸಿರಿಗೆರೆ ಮಠದ ಬಗ್ಗೆ ಅಪ ಪ್ರಚಾರ

ಬಂಡವಾಳಶಾಹಿ ಜೊತೆ ಶಾಮನೂರು ಶಿವಶಂಕರಪ್ಪ

ಹಿರಿಯ ವ್ಯಕ್ತಿ ಶಾಮನೂರು ಶಿವಶಂಕರಪ್ಪ ಸಹ  ಅಪಪ್ರಚಾರ ಮಾಡುವ ಅಣಬೇರು ರಾಜಣ್ಣನಂತಹ ಕೆಲವು ಬಂಡವಾಳಶಾಹಿಗಳ ಜೊತೆ ಇರುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡ ಶ್ರೀಗಳು,  ಗುರುಗಳು ರಾಜಕಾರಣಿಗಳಂತೆ  ಮಾಜಿಯಾಗುವುದಿಲ್ಲ. ಪೀಠಕ್ಕೆ ಸ್ವಾಮೀಜಿ ಮಾಡಿದ ನಂತರ ದೊಡ್ಡ ಗುರುಗಳಾಗುತ್ತಾರೆ.  ರಾಜಕೀಯ ಕ್ಕೂ, ಧರ್ಮ ಪೀಠಕ್ಕೂ ವ್ಯತ್ಯಾಸ ಇರುತ್ತದೆ ಎಂದು ಹೇಳಿದರು.

ಸಿರಿಗೆರೆ, ಆ.30- ಹಿರಿಯ ಗುರುಗಳಾದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಬಂಡವಾಳ ಶಾಹಿಗಳಿಂದ ಮಠದ ಬಗ್ಗೆ ಅಪಪ್ರಚಾರವಾಗುತ್ತಿದೆ. ಇದು ಬಂಡ ವಾಳ ಶಾಹಿಗಳು ಮತ್ತು ನಿಷ್ಟಾವಂತರ ಭಕ್ತರ ಮಧ್ಯದ ಸಂಘರ್ಷವೇ ಹೊರತು, ಗುರುಗಳು ಮತ್ತು ಶಿಷ್ಯರ ನಡುವೆ ಸಂಘರ್ಷವಲ್ಲ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

 ದಾವಣಗೆರೆ, ಚಿತ್ರದುರ್ಗ, ಹರಪನಹಳ್ಳಿ, ಜಗಳೂರು ತಾಲ್ಲೂಕಿನ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ರಕ್ತದಲ್ಲಿ ಸಹಿ ಮಾಡಿರುವ ಸಹಿಗಳೊಂದಿಗೆ  ಇರುವ ಪತ್ರವನ್ನು ಸ್ವಾಮೀಜಿಗೆ ಅರ್ಪಿಸಿದ ನಂತರ ಭಕ್ತರನ್ನುದ್ದೇಶಿಸಿ ಸ್ವಾಮೀಜಿ ಮಾತನಾಡಿದರು.

ಕೆಲವೇ ಬಂಡವಾಳ ಶಾಹಿಗಳಿಂದ ಅಪ ಪ್ರಚಾರ ವಾಗುತ್ತಿದೆ ಎಂದು ರಾಜ್ಯದಾದ್ಯಂತ ಶಿಷ್ಯರು ಸಭೆ ಸೇರಿ ಗುರುಗಳಿಗೂ ಹಾಗೂ ಸಾಧು ಸದ್ದರ್ಮ ಸಂಘಕ್ಕೆ ಬೆಂಬಲಿಸಿ ಸಿರಿಗೆರೆಗೆ ಬರುತ್ತಿದ್ದಾರೆ. ಯಾವುದೇ ಅಪ್ರಚಾರಕ್ಕೆ ಧೃತಿಗೆಡುವುದಿಲ್ಲ ಎಂದು ಹೇಳಿದರು.

ಮಠದ ಹೆಸರಿನಲ್ಲಿ ಹಿಂದಿನ ಗುರುಗಳ ಹೆಸರಿನಲ್ಲಿ, ನನ್ನ ಹೆಸರಿನಲ್ಲಿ ಹಾಗೂ ಕೆಲವು ಮಠದ ಭಕ್ತರ ಹೆಸರಿನಲ್ಲೂ ಆಸ್ತಿ ಇದೆ. ಇದು ಹಿಂದಿನಂತೆ ನಡೆದು ಬಂದಿದೆ ಎಂದು ಸ್ವಾಮೀಜಿ ಭಕ್ತರಿಗೆ ತಿಳಿಸಿದರು.

 ಹಿಂದಿನ ಹಿರಿಯ ಗುರುಗಳು ನೇಮಕ ಮಾಡಿದಂತೆ ಪೀಠಾಧಿಪತಿಗಳ ನೇಮಕವನ್ನು ಸ್ವಾಮೀಜಿಗಳಾದ ನೀವೇ ಮಾಡಿ. ನಿಮ್ಮ ತೀರ್ಮಾನಕ್ಕೆ ಬದ್ಧರಿದ್ದೇವೆ ಎಂದು ಆಗಮಿಸಿದ ಭಕ್ತರು ಹೇಳಿದರು. ವೇದಿಕೆಯಲ್ಲಿ ಸಾಧು ಸದ್ಧರ್ಮ ಸಮಾಜದ ಮುಖಂಡ ಪಿ.ಮಹಾಭಲೇಶ್ವರ ಗೌಡ, ಗುಂಡಗತ್ತಿ ಮಂಜಣ್ಣ, ಅನಿತ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!