ಮಲೇಬೆನ್ನೂರು, ಸೆ.1- ಭಾನುವಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಗಂಗೆ ನೆಳ್ಯಪ್ಪ ಅವರು ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಉಪಾಧ್ಯಕ್ಷೆ ಶ್ರೀಮತಿ ಕಮಲಮ್ಮ, ನಿರ್ದೇಶಕರಾದ ಹೆಚ್.ಎಂ. ಯಲ್ಲಪ್ಪ ರೆಡ್ಡಿ, ಟಿ. ರಂಗಪ್ಪ, ಬಿ.ಎಸ್. ಸದಾಶಿವಪ್ಪ, ಎ. ಮಹಬೂಬ್ ಸಾಬ್, ಬಿ. ಶಾಂತಪ್ಪ, ಹೆಚ್.ಕೆ. ಚಂದ್ರಪ್ಪ, ಬಸವರಾಜಪ್ಪ, ಶ್ರೀಮತಿ ಯಲ್ಲಮ್ಮ, ಸಂಘದ ಸಿಇಓ ಎಂ. ಆರ್. ಈರಪ್ಪ ಈ ವೇಳೆ ಹಾಜರಿದ್ದರು. ಸಹಕಾರ ಅಭಿವೃದ್ಧಿ ಅಧಿಕಾರಿ ಸುನೀತಾ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.