ಹರಿಹರ, ಅ.18- ನಗರದ ಶ್ರೀ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 20 ರಿಂದ ಮೂರು ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳ 353 ನೇ ಆರಾಧನಾ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಎ.ಬಿ. ಬಸವರಾಜ್, ಕಾರ್ಯದರ್ಶಿ ಸುಕುಮಾರ್, ಖಜಾಂಚಿ ಎಸ್. ರಂಗನಾಥ್ ತಿಳಿಸಿದ್ದಾರೆ.
ದಿನಾಂಕ 20 ನೇ ಮಂಗಳವಾರ ಬೆಳಿಗ್ಗೆ 7 ಕ್ಕೆ ಅಷ್ಟೋತ್ತರ ಪಂಚಾಮೃತ ಸೇವೆ ಹಾಗೂ ಅಲಂಕಾರ ಸೇವೆ, 9ಕ್ಕೆ ಪ್ರವಚನ ಮಂಗಳ ಕಾರ್ಯಕ್ರಮ, 10ಕ್ಕೆ ಉಮಾ ಭಟ್ ಮನೋಜವಂ ಅವರಿಂದ ಸಂಗೀತ ಕಾರ್ಯಕ್ರಮ, 12ಕ್ಕೆ ಮಹಾಮಂಗಳಾರತಿ, 1 ಗಂಟೆಗೆ ಮಹಾ ಪ್ರಸಾದ, ಸಂಜೆ 6 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, 8ಕ್ಕೆ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಲಿದೆ.
ದಿನಾಂಕ 21 ಬುಧವಾರ ಬೆಳಿಗ್ಗೆ 8ಕ್ಕೆ ಫಲ, ಪುಷ್ಪಾದಿಗಳ ಮೆರವಣಿಗೆ ಹಾಗೂ ಗುರುಗಳಿಗೆ ಫಲ, ಪಂಚಾಮೃತ ಅಭಿಷೇಕ, 9.30ಕ್ಕೆ ರಾಯರ ಕನಕಾಭಿಷೇಕ ಮತ್ತು ತುಲಾಭಾರ, ಪಲ್ಲಕ್ಕಿ ಉತ್ಸವ, ಬೆಳ್ಳಿ ರಥೋತ್ಸವ ಹಾಗೂ ಪವಮಾನ ಹೋಮ 12ಕ್ಕೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ, ಸಂಜೆ 6ಕ್ಕೆ ಸಮುದಾಯ ಭವನದಲ್ಲಿ ವಿಶೇಷ ದೀಪ ಅಲಂಕಾರ ಸೇವೆ 8ಕ್ಕೆ ಮಹಾಮಂಗಳಾರತಿ ನಡೆಯಲಿದೆ.
ದಿನಾಂಕ 22ರ ಗುರುವಾರ ಬೆಳಗ್ಗೆ 9.30ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, 12 ಗಂಟೆಗೆ ಮಹಾರಥೋತ್ಸವ 1 ಗಂಟೆಗೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ, ಸಂಜೆ 6 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ, 8.30 ಕ್ಕೆ ಮಹಾ ಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.