ಆನ್‌ಲೈನ್‌ನಲ್ಲಿ ಇಂದು ಶರಣ ಚಿಂತನ ಗೋಷ್ಠಿ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಹಡಪದ ಅಪ್ಪಣ್ಣ ಜಯಂತಿ ಅಂಗವಾಗಿ ಇಂದು ಸಂಜೆ 7 ರಿಂದ 9 ರವರೆೆಗೆ ಆನ್‌ಲೈನ್‌ನಲ್ಲಿ ಶರಣ ಚಿಂತನ ಗೋಷ್ಠಿ ನಡೆಯಲಿದೆ.
ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ. ಶಶಿಕಾಂತ ಪಟ್ಟಣ ಅವರು ಹೊಸ ಜಗತ್ತಿಗೆ ಬಸವ ತತ್ವ ವಿಷಯವಾಗಿ ಅನುಭಾವದ ನುಡಿಗಳನ್ನಾಡುವರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಗೂಗಲ್ ಮೀಟ್ ಜಾಯನಿಂಗ್ ಇನ್ಫೋ ವಿಡಿಯೋ ಕಾಲ್ ಲಿಂಕ್:
https://meet.google.com/aum-ikxp-eod