ಮಲೇಬೆನ್ನೂರು, ಆ.12- ನಂದಿತಾವರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಜೀವನ ಮುಕ್ತಿ ಫೌಂಡೇಷನ್ ವತಿಯಿಂದ ಕ್ರೀಡಾ ಸಾಮಗ್ರಿಗಳನ್ನು ಇತ್ತೀಚೆಗೆ ವಿತರಿಸಲಾಯಿತು. ಟೆನಿಸ್ಕಾಟ್, ವಾಲಿಬಾಲ್, ಥ್ರೋ ಬಾಲ್, ಬ್ಯಾಡ್ಮಿಂಟನ್ ಬ್ಯಾಟ್, ಜಂಪಿಂಗ್ ರೂಪ್, ಕ್ರಿಕೆಟ್ ಬ್ಯಾಟ್ ಸೆಟ್ ಸೇರಿ ಇನ್ನೂ ಅನೇಕ ಆಟದ ಸಾಮಗ್ರಿಗಳನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾತನಾಡಿದ ಅನುದಾನಿತ ಶಾಲಾ ನೌಕರರ ಒಕ್ಕೂಟದ ಅಧ್ಯಕ್ಷ ಕೆ.ಭೀಮಪ್ಪ ಅವರು, ಬೆಂಗಳೂರಿನ ವಿವಿಧ ಸಂಸ್ಥೆಯವರು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಹಾಗೂ ಉತ್ತಮ ಕಲಿಕೆಗೆ ಪ್ರೋತ್ಸಾಹಿಸಿದ್ದಾರೆ. ಕೊಡುವವರ ಮನಸ್ಸು ಉದಾರವಿದ್ದಾಗ ನಮ್ಮ ಸರ್ಕಾರಿ ಶಾಲೆಗಳು ಪ್ರಗತಿಯತ್ತ ಹೆಜ್ಜೆ ಹಾಕುತ್ತೇವೆ ಎಂದು ಜೀವನ ಮುಕ್ತಿ ಸಂಸ್ಥೆಯ ಕೊಡುಗೆಯನ್ನು ಶ್ಲಾಘಿಸಿದರು. ಸಂಸ್ಥೆಯ ಕಿರಣ್ ಕುಮಾರ್, ರೂಪ, ಶಾಲಾ ಮುಖ್ಯ ಶಿಕ್ಷಕ ಬೀರಪ್ಪ, ಶಿಕ್ಷಕರಾದ ಮಂಜಪ್ಪ ಬಿದರಿ, ಶರಣು ಕುಮಾರ್, ರತ್ನಮ್ಮ, ಎಸ್.ಡಿ.ಎಂ.ಸಿ ಅಧ್ಯಕ್ಷ ರವಿರಾಜ್, ಸದಸ್ಯರಾದ ಬಿ.ಕೆ.ಪಾಟೀಲ್ ಹಾಗೂ ಇತರರು ಹಾಜರಿದ್ದರು.