ರೋಟರಿ : ಕಲಿಕಾ ಸಾಮಗ್ರಿ ವಿತರಣೆ

ದಾವಣಗೆರೆ, ಆ.11- ನಗರದ ರೋಟರಿ ಕ್ಲಬ್‌ ದಾವಣಗೆರೆ ಮಿಡ್‌ ಟೌನ್‌ ವತಿಯಿಂದ ದುಗ್ಗಮ್ಮ ದೇವಸ್ಥಾನ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 60 ಮಕ್ಕಳಿಗೆ ಗುರುತಿನ ಕಾರ್ಡ್‌, ಬೆಲ್ಟ್‌ ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಈ ವೇಳೆ ಇನ್ನರ್‌ವ್ಹೀಲ್‌ ಅಧ್ಯಕ್ಷರಾದ ಸಂಜನಾ ಪಿ. ಗೌಡರ್‌, ಕಾರ್ಯದರ್ಶಿ ಭಾರತಿ ಕೇಶವ್‌, ಕ್ಲಬ್‌ನ ಬಸವಂತಪ್ಪ, ಕಾರ್ಯದರ್ಶಿ ಡಾ.ಎಂ.ಎಸ್‌. ಹೋಲಿ, ಶೋಭಾ ಶಿವರಾಜ್‌, ಎಸ್‌.ಟಿ. ಕುಸುಮ ಶೆಟ್ಟಿ, ಎ.ಎನ್‌. ಶೇಖರ್‌ ಇದ್ದರು.

error: Content is protected !!