ವಾಯು ಗುಣಮಟ್ಟ ಹೆಚ್ಚಳಕ್ಕೆ ಯೋಜನೆ ರೂಪಿಸಿ

ವಾಯು ಗುಣಮಟ್ಟ ಹೆಚ್ಚಳಕ್ಕೆ ಯೋಜನೆ ರೂಪಿಸಿ

ಕಾರ್ಯಾಗಾರದಲ್ಲಿ ಪಾಲಿಕೆ ಆಯುಕ್ತೆ ರೇಣುಕಾ ಕರೆ

ದಾವಣಗೆರೆ, ಜು.29- ಸರ್ಕಾರದ ಎಲ್ಲಾ ಇಲಾಖೆಗಳು ದಾವಣಗೆರೆ ನಗರದ ವಾಯು ಗುಣ ಮಟ್ಟ ಉತ್ತಮಗೊಳಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳೊಂದಿಗೆ ಕ್ರಿಯಾ ಯೋಜನೆ ರೂಪಿಸಲು ಪಾಲಿಕೆ ಆಯುಕ್ತೆ ರೇಣುಕಾ ಕರೆ ನೀಡಿದರು.

ನಗರದ ಖಾಸಗಿ ಹೋಟೆಲ್ಲೊಂದರ ಸಭಾಂಗಣ ದಲ್ಲಿ ಮಹಾನಗರಪಾಲಿಕೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಿ-ಸ್ಪೆಪ್ ಇವರ ಸಹಯೋಗದಲ್ಲಿ ಕೈಗಾರಿಕಾ ಇಲಾಖೆ, ಆಹಾರ & ನಾಗರಿಕ ಸರಬರಾಜು ಇಲಾಖೆ, ಆರ್‌ಟಿಒ, ಕೆಎಸ್‌ಆರ್‌ಟಿಸಿ ಹಾಗೂ ಇತರೆ ಇಲಾಖಾ ಅಧಿಕಾರಿಗಳಿಗೆ ಆಯೋಜಿಸ ಲಾಗಿದ್ದ ರಾಷ್ಟ್ರೀಯ ಸ್ವಚ್ಛಗಾಳಿ ಕಾರ್ಯ ಕ್ರಮದಡಿ ನಗರದ ವಾಯು ಗುಣಮಟ್ಟ ಉತ್ತಮ ಪಡಿಸುವ ನಿಟ್ಟಿನಲ್ಲಿ ಸಾಮರ್ಥ್ಯಾಭಿ ವೃದ್ಧಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ನಗರದಲ್ಲಿ 10 ಪಿಎಂ ಗಾತ್ರದ ಧೂಳಿನ ಕಣಗಳನ್ನು ನಿಯಂತ್ರಿಸಲು ಯಾಂತ್ರೀಕೃತ ರಸ್ತೆ ಗುಡಿಸುವಿಕೆ ಯಂತ್ರಗಳನ್ನು ಖರೀದಿಸಿ ಉಪಯೋಗಿಸಲಾಗುತ್ತಿದೆ. ನಗರದ ಹಸಿರೀಕರಣ, ರಸ್ತೆಗಳಲ್ಲಿ ಎಂಡ್ ಟು ಎಂಡ್ ಪೇವರ್ ಅಳವಡಿಕೆ, ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ವಾಯು ಮಾಲಿನ್ಯಕ್ಕೆ ಕಾರಣವಾಗಿರುವ ಮಂಡಕ್ಕಿ ಭಟ್ಟಿಗಳಲ್ಲಿ ವಿದ್ಯುತ್, ಎಲ್.ಪಿ.ಜಿ, ಸಿಎನ್‌ಜಿ ಯಂತಹ ಬದಲಿ ಇಂಧನ ಉಪಯೋಗಿಸಿ ಆಧುನಿಕ, ವೈಜ್ಞಾನಿಕ ಪದ್ದತಿಗಳನ್ನು ಅಳವಡಿಸಿಕೊಂಡು ವಾಯು ಗುಣಮಟ್ಟ ಉತ್ತಮಗೊಳಿಸಲು ನಾವೆಲ್ಲರೂ ಶ್ರಮಿಸೋಣ ಎಂದು ತಿಳಿಸಿದರು.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ನಿರ್ದೇಶಕ ಜಿ. ಚಂದ್ರಬಾಬು ಕಾರ್ಯಾಗಾರ ಉದ್ಘಾಟಿಸಿದರು.  ಕಾರ್ಯಕ್ರದಲ್ಲಿ ಯೋಜನಾ ನಿರ್ದೇಶಕರಾದ ಡಾ.ಎನ್. ಮಹಾಂತೇಶ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳಾದ ಡಾ.ಹೆಚ್. ಲಕ್ಷ್ಮೀಕಾಂತ್, ರಾಜಶೇಖರ್ ಪುರಾಣಿಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: Content is protected !!