ಹರಪನಹಳ್ಳಿ, ಜು. 17 – ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮಣ್ಣೆತ್ತಿನ ಅಮಾವಾಸ್ಯೆಯ ನಂತರ ತಾಲ್ಲೂಕಿನ ವಿವಿಧ ತಾಂಡಾಗಳಲ್ಲಿ ಸೀತ್ಲಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ ಬಳಿಕ ಹರಪನಹಳ್ಳಿ ಪಟ್ಟಣದಲ್ಲಿರುವ ಬಂಜಾರ್ ಸಮುದಾಯದ ಮುಖಂಡರ ನೇತೃತ್ವದಲ್ಲಿ ಸೀತ್ಲಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಪಟ್ಟಣದ ಪೊಲೀಸ್ ಲೈನ್ ಹಿಂಭಾಗದಲ್ಲಿರುವ ಸಂತ ಶ್ರೀ ಸೇವಾಲಾಲ್ ಮಹಾರಾಜರ ಮತ್ತು ಮಾತೆ ಶ್ರೀ ಮರಿಯಮ್ಮ ದೇವಿ ದೇವಸ್ಥಾನದ ಹತ್ತಿರ ಇರುವ ಸಾತೂ ಯಾಡಿ ದೇವರ ಹತ್ತಿರ ಪಟ್ಟಣದ ಬಂಜಾರ್ ಸಮುದಾಯದ ಎಲ್ಲಾ ಮುಖಂಡರು ಸೇರಿ ಸಂಪ್ರದಾಯದಂತೆ ಸೀತ್ಲಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮಾರಕ ರೋಗ-ರುಜಿನಗಳು ದೂರಾಗಲಿ, ಧನ-ಧಾನ್ಯ ಸಮೃದ್ದಿಯಾಗಿ ಬೆಳೆದು ಸುಖ, ಶಾಂತಿ, ನೆಮ್ಮದಿಯ ಬದುಕು ನಮ್ಮದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಬೇವಿನಮರದ ಬುಡದಲ್ಲಿ ಏಳು ಮಾತೆಯ ರನ್ನು ಪ್ರತಿಬಿಂಬಿಸುವ ಮರದ ಏಳು ಕೊಂಬೆಯ ತುಂಡುಗಳನ್ನು ಇಲ್ಲವೇ, ಏಳು ಕಲ್ಲುಗಳಿಗೆ ಊರ್ಮಂಜು ಬಣ್ಣ ಲೇಪಿಸಿ, ಕುಂಕುಮಾರ್ಚನೆ ಮಾಡುವುದು ಪದ್ದತಿ, ಮಾತೆಯರ ಪ್ರತಿಬಿಂಬದ ಹಿಂದೆ ಲೂಕಡ್ (ಸೇವಕ) ನನ್ನು ಪ್ರತಿಷ್ಠಾಪಿ ಸುತ್ತಾರೆ. ಬಳಿಕ ಕುರಿ, ಕೋಳಿ, ಹರಕೆ ಹೊತ್ತ ಭಕ್ತರು ಲೂಕಡ್ಗೆ ರಕ್ತಾಭಿಷೇಕ ಹಾಗೂ ಮಾತೆಯರಿಗೆ ಸಿಹಿ ಭೋಜನದ ಎಡೆ ಹಾಗೂ ಪೂಜೆ ಸಲ್ಲಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಬಂಜಾರ್ ಸಮಾಜದ ಮುಖಂಡರಾದ ಕುಬೇಂದ್ರ ನಾಯ್ಕ, ಡಾ. ರಮೇಶ್ ಕುಮಾರ್, ಚರ್ತಯ್ಯನಾಯ್ಕ್, ರಘುರಾಮ್ ನಾಯ್ಕ್, ಮಂಜಾನಾಯ್ಕ್, ಡಾ. ಶಂಕರ್ ನಾಯ್ಕ್, ಚಂದ್ರ ನಾಯ್ಕ್, ರವಿನಾಯ್ಕ್, ಶಿವಾಜಿನಾಯ್ಕ್, ರಾಜ್ಕುಮಾರ್, ಎಲ್. ಮಂಜಾನಾಯ್ಕ್, ಪೊಲೀಸ್ ವಾಸುದೇವ ನಾಯ್ಕ್, ಲಕ್ಯಾನಾಯ್ಕ್, ಕೃಷ್ಣನಾಯ್ಕ್, ಹರಕನಾಳು ಮಂಜಾನಾಯ್ಕ್, ಕುಮಾರ್ ನಾಯ್ಕ್, ವಕೀಲ ಮಂಜಾನಾಯ್ಕ್, ಜಗದೀಶ್ ನಾಯ್ಕ್, ರಮೇಶ್ ನಾಯ್ಕ್, ಭಜನನಾಯ್ಕ್, ಶ್ರೀಕಾಂತ್ ನಾಯ್ಕ್, ರವಿನಾಯ್ಕ್, ರಾಠೋಡ್ ನಾಯ್ಕ್, ಮಂಜ್ಯಾನಾಯ್ಕ್, ಸೇರಿದಂತೆ ಬಂಜಾರ್ ಸಮುದಾಯದ ಹಿರಿಯ ಮತ್ತು ಕಿರಿಯ ಯುವಕರು ಇದ್ದರು.