ಮಾಗನೂರು ಬಸಪ್ಪ ಶಾಲೆಯಲ್ಲಿ ವಿದ್ಯುನ್ಮಾನ ಮತ ಯಂತ್ರದ ಮೂಲಕ ಚುನಾವಣೆ

ಮಾಗನೂರು ಬಸಪ್ಪ ಶಾಲೆಯಲ್ಲಿ ವಿದ್ಯುನ್ಮಾನ ಮತ ಯಂತ್ರದ ಮೂಲಕ ಚುನಾವಣೆ

ದಾವಣಗೆರೆ, ಜು. 19- ಮಾಗನೂರು ಬಸಪ್ಪ ಪಬ್ಲಿಕ್ ಸ್ಕೂಲ್‌ನಲ್ಲಿ ವಿದ್ಯುನ್ಮಾನ ಮತ ಯಂತ್ರದ ಮೂಲಕ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ಪ್ರವಾಸದ ಕಾರ್ಯದರ್ಶಿ, ಕ್ರೀಡಾ ಕಾರ್ಯದರ್ಶಿ, ಸಾಂಸ್ಕೃತಿಕ ಕಾರ್ಯದರ್ಶಿ ಗಳನ್ನು ವಿದ್ಯಾರ್ಥಿಗಳು ಮತದಾನ ಮಾಡುವ ಮೂಲಕ ಆಯ್ಕೆ ಮಾಡಿದರು.

ಇದೇ ವೇಳೆ ತರಗತಿ ಪ್ರತಿನಿಧಿಗಳನ್ನೂ ಸಹ ಮತದಾನದ ಮೂಲಕ ಆಯ್ಕೆ ಮಾಡಲಾಯಿತು. ಈ ವಿನೂತನ ಮಾದರಿ ಚುನಾವಣೆಯಲ್ಲಿ ಮಾಗನೂರು ಪಬ್ಲಿಕ್ ಟ್ರಸ್ಟ್ ಗೌರವ ಕಾರ್ಯದರ್ಶಿ ಎಂ.ಬಿ. ಸಂಗಮೇಶ್ವರಗೌಡರು, ಶಾಲಾ ಮುಖ್ಯಸ್ಥರಾದ ಎಸ್.ಆರ್. ಶಿರಗಂಬಿ, ಎ.ಎಸ್. ಕುಸುಮ, ಎಸ್. ಮಂಜುನಾಥ ಅವರುಗಳು ಮಕ್ಕಳಿಗೆೆ ಶುಭ ಕೋರಿ `ನಿಮ್ಮ ಮತ ನಿಮ್ಮ ಅಮೂಲ್ಯ ಹಕ್ಕು’ ಅದನ್ನು ಸಮರ್ಥವಾಗಿ ಬಳಸಿ ನಾಯಕರನ್ನು ಚುನಾಯಿಸಿ ಎಂದು ಕರೆ ನೀಡಿದರು.

error: Content is protected !!