ದಾವಣಗೆರೆ, ಜು.15-ನಗರದ ಬಿಐಇಟಿ ಕಾಲೇಜು ಬಳಿ ಡಿವೈಡರ್ಗೆ ಕಾರ್ಡಿಕ್ಕಿ ಹೊಡೆದ ಪರಿಣಾಮ ಓರ್ವನ ಸ್ಥಿತಿ ಗಂಭೀರ ವಾಗಿದ್ದು, ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳಿದ ನಾಲ್ವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಭಾನುವಾರ ರಾತ್ರಿ 1 ಗಂಟೆ ವೇಳೆಯಲ್ಲಿ ಜೆ.ಜೆ.ಎಂ. ಮೆಡಿಕಲ್ ಕಾಲೇಜಿನ ಐವರು ವಿದ್ಯಾರ್ಥಿಗಳು ಶಾಮನೂರಿನಿಂದ ಲಕ್ಷ್ಮೀಫ್ಲೋರ್ಮಿಲ್ ಮಾರ್ಗವಾಗಿ ಬರುವಾಗ ಈ ಘಟನೆ ನಡೆದಿದೆ.
ಶಿಕಾರಿಪುರಿದ ಮೂಲದ ಓರ್ವ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದು, ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಿಐಇಟಿ ರಸ್ತೆ ಬಳಿ ಕಾರು ಅಪಘಾತ : ದೂರು
ನಗರದ ಶಾಮನೂರು ರಸ್ತೆ ಬಿಐಇಟಿ ಕಾಲೇಜು ಬಳಿ ಭಾನುವಾರ ರಾತ್ರಿ ಕಾರು ಅಪಘಾತ ನಡೆದಿದ್ದು, ರಾಣೇಬೆನ್ನೂರು ನಗರದ ನಿಶ್ಚಲ್ ಎಸ್. (24) ವಿರುದ್ಧ ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜೆ.ಜೆ.ಎಂ. ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳಾದ ನಾನು ಹಾಗೂ ಸಹಪಾಠಿಗಳಾದ ಸಂಜಯ್, ಸುದೀಪ್, ಮೊಹ್ಮದ್ ಫೈಜ್, ಹಾಗೂ ಹಿರಿಯ ವಿದ್ಯಾರ್ಥಿ ನಿಶ್ಚಲ್ ಐವರು ಟೊಯೋಟಾ ಇನ್ನೋವಾ ಕಾರ್ನಲ್ಲಿ ಊಟಕ್ಕೆಂದು ಬನಶಂಕರಿ ಬಡಾವಣೆ ಬಳಿಯ ಹೋಟೆಲ್ಗೆ ಹೋಗಿದ್ದೆವು.
ಊಟ ಮಾಡಿಕೊಂಡು ರಾತ್ರಿ 1 ಗಂಟೆ ಸಮಯದಲ್ಲಿ ಕಾರು ಚಲಾಯಿಸುತ್ತಿದ್ದ ನಿಶ್ಚಲ್, ಬಿಐಇಟಿ ಕಾಲೇಜು ಹತ್ತಿರ, ಶಾಮನೂರು ರಸ್ತೆಯಲ್ಲಿ ಕಾರನ್ನು ವೇಗವಾಗಿ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಮಧ್ಯದಲ್ಲಿನ ಡಿವೈಡರ್ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ಈ ವೇಳೆ ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಸಂಜಯ್ ತಲೆ, ಎದೆ, ಎಡಗೈ, ಬಲಭಜ, ಕಿವಿ ಹಾಗೂ ಬೆನ್ನಿಗೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕಾರನ್ನು ಚಲಾಯಿಸುತ್ತಿದ್ದ ನಿಶ್ಚಲ್ಗೆಗೆ ಮೈಕೈಗೆ ಪೆಟ್ಟು ಬಿದ್ದು ಗಾಯಗಳಾಗಿವೆ. ಕಾರಿನ ಮಧ್ಯದ ಸೀಟಿನಲ್ಲಿ ಬಲಗಡೆ ಸೀಟಿನಲ್ಲಿ ಕುಳಿತಿದ್ದ ಮೊಹ್ಮದ್ ಫೈಜಾನನಗೆ ಯಾವುದೇ ಗಾಯಗಳಾಗಿಲ್ಲ.
ಅಪಘಾತ ಸ್ಥಳಕ್ಕೆ ಬಂದ ಆಂಬ್ಯುಲೆನ್ಸ್ನಲ್ಲಿ ಗಾಯಗೊಂಡಿದ್ದ ಸಂಜಯ್ ಮತ್ತು ಸುದೀಪ್ ಅವರನ್ನು ಬಾಪೂಜಿ ಆಸ್ಪತ್ರೆಗೆ ಕೆರೆದುಕೊಂಡು ಹೋಗಿ ಚಿಕಿತ್ಸೆ ಕೆೊಡಿಸಿದೆವು. ಸಂಜಯ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಎಸ್.ಎಸ್.ಐಎಂ ಆಸ್ಪತ್ರೆಗೆ ದಾಖಲಿಸಲಾಯಿತು.
ಕಾರು ಅಪಘಾತಕ್ಕೆ ಕಾರಣರಾದ ನಿಶ್ಚಲ್ ವಿರುದ್ಧ ಕ್ರಮ ಜರುಗಿಸುವಂತೆ ಶಿವಮೊಗ್ಗ ಜಿಲ್ಲೆ ಹೊಸ ನಗರ ತಾಲ್ಲೂಕು ರಿಪ್ಪನ್ ಪೇಟೆ ವಾಸಿ ಯತೀಶ್ ಹೆಚ್.ಸರಾಫ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.