ಸಿಎ ಪರೀಕ್ಷೆಯಲ್ಲಿ ಪ್ರಥಮ ಹಂತದಲ್ಲೇ ಮನೋಜ್ ಉತ್ತೀರ್ಣ

ಸಿಎ ಪರೀಕ್ಷೆಯಲ್ಲಿ ಪ್ರಥಮ ಹಂತದಲ್ಲೇ ಮನೋಜ್ ಉತ್ತೀರ್ಣ

ದಾವಣಗೆರೆ, ಜು. 11 – ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ನಡೆಸುವ ದೇಶದ ಪ್ರಮುಖ ಪರೀಕ್ಷೆಗಳಲ್ಲೊಂದಾದ `ಚಾರ್ಟರ್ಡ್ ಅಕೌಂಟೆಂಟ್’ (C.A.) ಅಂತಿಮ ಪರೀಕ್ಷೆಯಲ್ಲಿ  ನಗರದ ಬಿ.ಎಸ್‌. ಮನೋಜ್‌ ಪ್ರಥಮ ಹಂತದಲ್ಲೇ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.

ಸ್ಥಳೀಯ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪೂರೈಸಿದ್ದ ಮನೋಜ್‌ ಅವರನ್ನು  ಕಾಲೇಜಿನ ಅಧ್ಯಕ್ಷ ಬಿ.ಸಿ. ಶಿವಕುಮಾರ್, ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲ ಪ್ರೊ. ಎಂ.ಸಿ. ಗುರು, ಉಪನ್ಯಾಸಕರು, ಕಚೇರಿ ಸಿಬ್ಬಂದಿಗಳು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಅಭಿನಂದಿಸಿದ್ದಾರೆ.

error: Content is protected !!