ಕನ್ನಡವಂ ದಿಟದಿ ಮನಂಗೈದು ಬೋಧಿಸಿದ ಬೃಂದಾರವಿಂದ ಡಾ. ಈಶ್ವರಪ್ಪ

ಕನ್ನಡವಂ ದಿಟದಿ ಮನಂಗೈದು ಬೋಧಿಸಿದ ಬೃಂದಾರವಿಂದ ಡಾ. ಈಶ್ವರಪ್ಪ

`ಕಾಮ್ ಜ್ಞಾನ್ ನೇ ಕಿಯಾ ಜೋ ಕಾಮ್ ಆಂಧೀ ಕರ್‍ನಾ ಸಕ್ತೀ’ : ಬಿರುಗಾಳಿ ಎಸಗದಿಹ ಕಾರ್ಯವನು ಜ್ಞಾನ ತಾನೆಸಗಿ ಹುದು’ ಎಂಬ ಉಕ್ತಿ ಎಂತಹ ವಿಷಮ ಸಮಯದಲ್ಲಿಯೂ ಜಾಗೃತಗೊಳಿಸಬಲ್ಲದು. ಸಾವಧಾನತೆಯೇ ಪರಾಕ್ರಮದ ಉತ್ತಮ ತರಹದ ಅಂಶ  (Discration is the better part of valour) ವನ್ನು ಗಣನೆಗೆ ತರುವಲ್ಲಿ ಮಾನವನ ಶ್ರೇಷ್ಠತೆಯ ಅಂತ್ಯ ಕ್ರಿಯೆಯಲ್ಲಿಯಲ್ಲ ಜ್ಞಾನದಲ್ಲಿ ಎನ್ನುವುದನ್ನು (The Great end of life is not action but knowledge) ತಿಳಿಸುತ್ತಾ, ಕಲ್ಪ ಕಲ್ಪಗಳಿಂದ ಸುತ್ತುತ್ತಿರುವ ಸೂರ್ಯನಾನುಭವ, ಉರಿಯೆಡೆಗೆ ಚಿಟ್ಟೆಯನ್ನು ಸೆಳೆವ ಪ್ರೇಮದ ಆಯಸ್ಕಾಂತವನ್ನು, ಕಾಡು ಹಳ್ಳಿಯೊಂದರ ಮಣ್ಣಿನ ಮಕ್ಕಳ, ಅವರ ಹಬ್ಬ-ಹರಿದಿನಗಳ, ಅವರ ಒಡನಾಟ, ಅಲ್ಲಿನ ಕಾಡು, ಆ ಕಾಡಿನ ಪ್ರಾಣಿ-ಪಕ್ಷಿಗಳ, ಸಾಮೀಪ್ಯ, ಇವು ಆ ಮಣ್ಣು ಹಡೆದ ಒಡಲಿಗೆ, ಭಾವಕೋಶವಾಗಿ ಪರಿಣಮಿಸಿದ ಪರಿಭಾ ವನೆಯ ಪರಿಜು ಪುತ್ಥಳಿಯೇ ಡಾ. ಎಂ.ಜಿ. ಈಶ್ವರಪ್ಪನವರು.

ಕರ್ನಾಟಕದ ರಾಜಕೀಯ ಇತಿಹಾಸ ಕ್ರಿ.ಶ.ಪೂ. 3ನೇ ಶತಮಾನದ ಶಾತವಾಹನರ ಕಾಲದಿಂದ ಆರಂಭವಾದರೂ ಶೈಕ್ಷಣಿಕ ಇತಿಹಾಸ 4ನೇ ಶತಮಾನದ ಹಿಂದೆ ಜ್ಞಾನಕ್ಕಾಗಿಯೇ ಜೀವನವನ್ನು ಮೀಸಲಾಗಿಟ್ಟಿದ್ದ ವಿದ್ವಜ್ಜನರು, ಸಾಧು-ಸಂತರು ತಮ್ಮ ಗುಡಿಗಳಲ್ಲೋ, ವಾನಾಂತರ ಪ್ರದೇಶದ ತಮ್ಮ ಆಶ್ರಮಗಳಲ್ಲೋ ಒಲಿದು ಬಂದ ಜ್ಞಾನದಾಹಿಗಳಿಗೆ ಉಚಿತವಾಗಿ ಶಿಕ್ಷಣವೀಯುತ್ತಿದ್ದರು. ಶಿಕ್ಷಣವನ್ನು ಸಾರ್ವತ್ರೀಕರಿಸಿ ಜಾತಿ, ಪದ್ಧತಿ, ಮತ, ಲಿಂಗ, ಯಾವ ಭೇದವೂ ಇಲ್ಲದೆಯೇ ಎಲ್ಲರಿಗೂ ಜ್ಞಾನವನ್ನು ನೀಡುತ್ತಿದ್ದುದು ಇತಿಹಾಸ ಸಾಕ್ಷಿಯಾಗಿದೆ. ಶಿಕ್ಷಕರು ಅಂದು ಮಬ್ಬಿಗೆ ಸಾಣೆ ಹಿಡಿದು; ಹೃದಯಕ್ಕೆ ವಿಚಾರಧಾರೆಯನ್ನು ಅದು ಎಲ್ಲಿಯೇ ಇರಲಿ, ಯಾರಲ್ಲಿಯೇ ಇರಲಿ, ಕಾಣುವ ವಿಶಾಲ ಗ್ರಾಸವನ್ನು ಗುರುತಿಸುವ ಔದಾರ್ಯವನ್ನು ಹಾಗೂ ಯೋಗ್ಯತೆ, ಸಾಮರ್ಥ್ಯ, ದೌರ್ಬಲ್ಯಗಳನ್ನು ಅರ್ಥ ಮಾಡಿಕೊಳ್ಳಬಲ್ಲವರಾಗಿದ್ದು, ಪ್ರೀತಿ, ವಿನೋದ, ಸಹಾಯ, ಸೌಜನ್ಯಗಳಿಂದ ಒಲಿಸಿಕೊಂಡು ಬೋಧಿಸುವುದರಲ್ಲಿ ಡಾ. ಎಂ.ಜಿ. ಈಶ್ವರಪ್ಪನವರು ಶ್ರಮಿಕರಾಗಿದ್ದರು.

ಈಶ್ವರಪ್ಪನವರು ಸಮಾಜದ ತರ್ಕ ಹಾಗೂ ವ್ಯಾಜ್ಯ ಪ್ರತಿಭಟನೆಗಳಲ್ಲಿ ಪ್ರವೇಶಿಸಿದರೂ ಪ್ರಶಾಂತ ಮನಸ್ಕರಾಗಿ, ಸತ್ಸಂಗ, ಆತ್ಮ ವಿಮರ್ಶೆ, ಅಂತರ್ಮುಖಗಳಿಂದ ಸುಸಂಸ್ಕೃತ (Introvert Culture)  ರಾಗಿ, ಸಾಧುಗಳಂತಿದ್ದು, ತಲಸ್ಪರ್ಶಿಯಾದ ಪಾಂಡಿತ್ಯಕ್ಕೆ ಸಾಕ್ಷಿಯಾದಂತೆ, ಸಾಕಾರ ಮೂರ್ತಿಗಳಾಗಿ, ಜಂಗಮಿಗಳಾಗಿ, ಕ್ಲುಪ ಕಾಲದಲ್ಲಿ ಉತ್ಸವ ಭರಿತರಾಗಿ, ನಿರ್ಬಂಧದ ಸಂಕೋಲೆಗಳಿಂದ ಕಳಚಿಕೊಂಡು, ಸರಳವಾಗಿ, ಔಚಿತ್ಯಗಳನ್ನರಿತುಕೊಂಡು ಜನನ-ಮರಣ ಯಮಳಗಳನ್ನು ಮೆಟ್ಟಿ ನಿಂತು, ಹೂವು-ಹೂವೇ, ಎಲೆಯೋ!-ಸೇರಿ-ಬೆಳೆಸಿ, ಪರಿಮಳ ತೂಕವನ್ನು ಮೋಡ ಮೋಡವಾಗಿ, ತುಂಡು:ತುಂಡಾಗಿ ಗಾಳಿಗೆ ಹೋಗದಂತೆ ಸಮಸ್ಕ ಕ್ರಮದಲ್ಲಿ, ಶಿಕ್ಷಣ ಕ್ಷೇತ್ರದ ಅತ್ಯುತ್ಸಾಹ ಉಬ್ಬಿನಲ್ಲಿ ಮನೋವೃತ್ತಿಯನ್ನು ಬೆಳೆಸಿಕೊಂಡವರು. 

ಎಂ.ಜಿ.ಯವರು ಶಿಷ್ಯನನ್ನು ಕುರಿತು ಏಳು! ಮನಸ್ಸನ್ನು ಗಟ್ಟಿ ಮಾಡಿಕೊಂಡು ಮುಂದಿನ ಕೆಲಸದಲ್ಲಿ ಪ್ರವೃತ್ತನಾಗು, ಯಾರ ಮನಸ್ಸನ್ನು ನೋಯಿಸಬಾರದು, ಎಲ್ಲರನ್ನೂ ಸಂತೋಷ ಪಡಿಸಬೇಕು ಎನ್ನುವುದು ಜೀವನದ ಮುಖ್ಯ ಸೂತ್ರವಾಗಬೇಕು. ಇದರ ಜೊತೆಗೆ ಗೌರವ, ಭಕ್ತಿ, ನಮ್ರತೆ, ವಿಶ್ವಾಸ, ಆದರ, ಸ್ನೇಹ, ವಾತ್ಸಲ್ಯ, ಮಮತೆ ಇವುಗಳನ್ನು ನಿರ್ಮಿಸಿಕೊಂಡು ಆತ್ಮೀಯತೆಯನ್ನು ಸಂಪಾದಿಸಬೇಕೆಂದು ತಿದ್ದಿ-ತೀಡಿ-ತೇದು ತೊಡವಾಗುವಂತೆ ಹೇಳುವ ಸ್ವಾತಂತ್ರ್ಯ ಇವರಿಗೆ ಮಾತ್ರ ಸಾಧ್ಯ. ಸ್ನೇಹ-ಸಾಧುತ್ವ ಹೊಂದಿಕೆಗಳಿಂದ ಸರಿ ಹೋದರೆ ಹೋಗಲಿ, ಅಪ್ರಿಯವಾದ ರೀತಿಯಲ್ಲಿ ವರ್ತಿಸಿ ದುಷ್ಟರನ್ನು ತಿದ್ದುವುದು ಅನಾವಶ್ಯಕವೆಂದು ತಿಳಿದವರು. ಕಾಲಿಗೆ ಮುಳ್ಳು ಚುಚ್ಚಿದರೆ ಅದು ಹಾಗೆಯೇ ಕೊಳತೆ ಕರಗಿ ಹೋಗಲಿ. ಅದನ್ನು ಸೂಜಿಯಿಂದ ಚುಚ್ಚಿ ತೆಗೆದು ಕಾಲು ನೋಯಿಸಿಕೊಳ್ಳುವುದು ಸರಿಯಲ್ಲವೆಂದು ಹೇಳುವ ಪ್ರವೃತ್ತಿಯವರು. ಅನೇಕತೆಯಲ್ಲಿ ಏಕತೆ (Units of Multi City) ಯನ್ನು, ಏಕತೆಯಲ್ಲಿ ಅನೇಕತೆ (Multi City of Units) ಯನ್ನು ಮನೋಹರ ಬಿಳುಪು ಬಣ್ಣಗಳಿಂದ ಸುತ್ತುವರಿದು ವಿಭಾವಗಳ ಕ್ರಿಯಾ ವಿಧಾನವನ್ನು ನಿಷ್ಪಕ್ಷಪಾತ (Disinterestedness)  ವಾಗಿ ಸ್ಪಷ್ಟಗೊಳಿಸುವುದರಲ್ಲಿ ಪ್ರಮಥರು.

ಶಿಕ್ಷಕ ಬುದ್ದಿಜೀವಿ. ಈ ಜಗತ್ತಿನ ಮಿಕ್ಕೆಲ್ಲಾ ಜೀವಿಗಳಿಂದ ಈತನನ್ನು ಪ್ರತ್ಯೇಕಗೊಳಿಸಿರುವುದು ಅವನ ಬೌದ್ಧಿಕ ಶಕ್ತಿ, ತನ್ನ ಬುದ್ದಿ ಶಾಕ್ತತೆಯಿಂದ ಇಡೀ ಮನುಕುಲವನ್ನು ನೈತಿಕ ಸ್ಥಲದ ಮೇಲೆ ರೂಪಿಸುವ ಪ್ರಗಲ್ಭನೆಂಬ ಸಾಮರ್ಥ್ಯ (Competence)ವನ್ನು, ಅಂತರ್‍ವಿನಿಮಯ ಕ್ಷಮತೆ (interchangeability)ಯನ್ನು, ವ್ಯಕ್ತಿತ್ವದ ವಿಶಿಷ್ಠತೆ(Personality in Specelization)ಯನ್ನು ಮತ್ತು ಸಾಂಸ್ಕೃತಿಕ ಪ್ರಸರಣ (Cultural Transmission)  ರಕ್ತಗತವಾಗಿ ಅನುವಂಶೀಯತೀಕರಣದಿಂದ ಸಮಾಜದ, ಸಂಸ್ಕೃತಿಯ ಹಾಗೂ ಮನುಷ್ಯನ ಸಕಲ ಚಿಂತನೆಗೂ ವ್ಯವಹಾರಕ್ಕೂ ಅಗತ್ಯವಾದ ಭಾಗವಾಗಿರುತ್ತಾನೆ. ಸ್ಮರಣೆ, ತಿಳುವಳಿಕೆಯ ಇರಾದೆ, ಸೂಕ್ತವಾದ ಉತ್ತರವನ್ನು ಕಂಡುಕೊಳ್ಳುವ ಪ್ರವೃತ್ತಿ ಮತ್ತು ಪರಸ್ಪರ ಸಂಬಂಧದ ಮಾಹಿತಿಗಳನ್ನು ವಿಂಗಡಿಸಿ ಅವುಗಳನ್ನು ವಿಶ್ಲೇಷಿಸಿ ಹೊಸ ವಿಚಾರಗಳಿಗೆ ನಾಂದಿ ಹಾಡುವ ಚಿಲಿಮಿಲಿಗ ಎಂ.ಜಿ.ಯವರು.

ವಿದ್ಯಯಾ ಅಮೃತಮಶ್ನುತೇ-ವಿದ್ಯೆಯಿಂದ ವ್ಯಕ್ತಿಯು ಅಮರತ್ವವನ್ನು ಸಾಧಿಸಬಲ್ಲ. ಸುಸಜ್ಜಿತ ರೀತಿಯಲ್ಲಿ ಕ್ರಿಯಾ ಪ್ರಾಪ್ತವಾಗುವಂತೆ ಕ್ರಮಯುಕ್ತವಾಗಿ, ಕಾಲೋಚಿತವಾಗಿ, ಸಂಯೋಜಿತವಾಗಿ, ಪ್ರತಿಕಂಪಿಸುವ ವೀಣೆಯುಜ್ವಲ ತಂತ್ರಿ ಯಂತೆ ಮೊಳಗಿದಾಗ, ಜ್ಞಾನಾಂಭರವನ್ನು ಕಾಣಲು ಸಾಧ್ಯ ವೆಂದು ಹಾಗೂ ಸಮಾಜ ಜೀವನವು ಪರಿಶುದ್ಧವಾಗಬೇಕಾದರೆ ಸತ್ಯದ ಜೊತೆಯಲ್ಲಿ ಅಹಿಂಸೆ, ಕಾರ್ಯಶ್ರದ್ಧೆ, ಸ್ನೇಹಪರತೆ, ಅನುಕಂಪೆ, ಸಹಿಷ್ಞತೆ, ಸಹೃದಯಭಾವ, ಪರೋಪಕಾರ ಗುಣ, ಮೊದಲಾದ ಸದ್ಗುಣಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವೆಂದು, ವಿಶ್ವದ ದೃಷ್ಠಿಯಲ್ಲಿ ಪ್ರಾಣಿ ವರ್ಗಕ್ಕಿಂತ ಮನುಷ್ಯ ಕುಲವು ಕೆಲವು ಶ್ರೇಷ್ಠವಾದ ಗುಣಗಳಿಂದ ಕೂಡಿದ್ದು, ಪ್ರಾಣಿಗಳಲ್ಲಿಲ್ಲದಿರುವ ಸೂಕ್ಷ್ಮ ದೃಷ್ಟಿ (Micro Approach), ಸ್ಥೂಲದೃಷ್ಠಿ  (Macro Approach),  ಬಾಹ್ಯತೆ ಅರಿವು (Special Awareness)  ಆಯಸ್ಕಾಂತೀಯ ತರಂಗ ಚಿತ್ರದಾಯಕ (Magnetic Resonance Immaging), ಆಂತಿಕ ಮನೋಮಯಸ್ಥಿತಿ (Internal Psychological States of the mind) ಗಾತ್ರ ಮತ್ತು ತೂಕ (Size and weight) ಇತ್ಯಾದಿಗಳನ್ನೊಳಗೊಂಡ ಯೋಗ್ಯನಾದ ವ್ಯಕ್ತಿ ತಾನು ಸುಖವಾಗಿ, ಸಂತೋಷವಾಗಿ ಬದುಕಿ, ತನ್ನ ನೆರೆ-ಹೊರೆಯವರನ್ನು ಸುಖ, ಸಂತೋಷವಾಗಿ ಬದುಕಲು ಚಲನಶೀಲಗತಿಕನಾಗುತ್ತಾನೆ ಎಂಬ ವಿಚಾರಗಳನ್ನು ಎಂ.ಜಿ.ಯವರು ತರಗತಿಗಳಲ್ಲಿ ಸಿದ್ಧ ಮಾದರಿಯನ್ನು ಮುರಿದು ಕಟ್ಟುವ ಮತ್ತು ವರ್ತಮಾನಕ್ಕೆ ಮುಖಾಮುಖಿಯಾಗಿಸುವ ನವೀನ ಕ್ರಮ, ಹೊಸ ಹುಡುಕಾಟ, ಸಮಕಾಲೀನ ಜ್ವಲಂತ ಸಮಸ್ಯೆಗಳನ್ನು ಜತನವಾಗಿಸಿಕೊಂಡು ಅಕ್ಷರಶಕ್ತಿ-ಶಬ್ದ ಶಕ್ತಿಯನ್ನು ಕಾಲೋಚಿತಗೊಳಿಸುವ ವೈಖರಿ ಬುದ್ಬುದಾದ್ಭುತ.

18 ಪುಸ್ತಕಗಳನ್ನು ರಚಿಸಿ ರಂಗಕರ್ಮಿಯಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಅದಮ್ಯರಾಗಿ ಪ್ರಥಮರಾದವರು. ಕನ್ನಡದ ಮೇರು ವ್ಯಕ್ತಿತ್ವದವರಾಗಿದ್ದ ಈಶ್ವರಪ್ಪ ಅವರು ದಿನಾಂಕ 01-06-2024 ರಂದು ಇಹಲೋಕದೂರಿಕೃತರಾದದ್ದು ಕನ್ನಡ ಭಾಷೆಗೆ ಮತ್ತು ಸಾಹಿತ್ಯಕ್ಕೆ ತುಂಬಲಾಗದ ಕಂಪಿತ.


– ಪ್ರೊ|| ಬಾತಿ ಬಸವರಾಜ್, ಶೈಕ್ಷಣಿಕ ಸಲಹೆಗಾರರು, ದವನ ಕಾಲೇಜು, ದಾವಣಗೆರೆ.  88845 27130

error: Content is protected !!