ಶರಣೆ ಅಕ್ಕ ಅನ್ನಪೂರ್ಣ ತಾಯಿ ನಿಧನಕ್ಕೆ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಸಂತಾಪ

ಶರಣೆ ಅಕ್ಕ ಅನ್ನಪೂರ್ಣ ತಾಯಿ ನಿಧನಕ್ಕೆ  ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಸಂತಾಪ

 ಸಾಣೇಹಳ್ಳಿ, ಮೇ 24- ಬೀದರ್‌ನ ಬಸವಗಿರಿ ಆಶ್ರಮದ ಶರಣೆ ಶ್ರೀ ಅಕ್ಕ ಅನ್ನಪೂರ್ಣ ತಾಯಿ ನಿಧನಕ್ಕೆ  ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಕ್ಕ ಅನ್ನಪೂರ್ಣ ತಾಯಿ ಒಬ್ಬ ಮಹಿಳೆಯಾಗಿ ಧಾರ್ಮಿಕ ಕ್ಷೇತ್ರದಲ್ಲಿ ಆಸಕ್ತಿ ಹೊಂದಿ ಬಸವ ತತ್ವವನ್ನು ಅಪಾರವಾಗಿ ನಂಬಿಕೊಂಡಿದ್ದರು. ತಮ್ಮದೇ ಆದ ಬಸವಗಿರಿ ಆಶ್ರಮವನ್ನು ಬೀದರ್‍ನಲ್ಲಿ ಮಾಡಿಕೊಂಡು ತುಂಬಾ ಎತ್ತರಕ್ಕೆ ಬೆಳೆದ ಒಬ್ಬ ಶರಣೆ. ನಾಡಿನ ನಾನಾ ಭಾಗಗಳಲ್ಲಿ ತಿಂಗಳುಗಟ್ಟಲೇ ಪ್ರವಚನ ಮಾಡುತ್ತಿದ್ದ  ಅವರು, ಅನೇಕ ಧಾರ್ಮಿಕ ಕೃತಿಗಳನ್ನು ರಚನೆ ಮಾಡಿದ್ದಾರೆ ಎಂದು ಪಂಡಿತಾರಾಧ್ಯ ಸ್ವಾಮೀಜಿ ಸ್ಮರಿಸಿದ್ದಾರೆ.   

ಸಾಣೇಹಳ್ಳಿಯ ಶಿವಸಂಚಾರದ ನಾಟಕಗಳನ್ನು ಬೀದರ್‍ಗೆ ಕರೆಸಿ ಪ್ರದರ್ಶನ ಮಾಡಿಸುತ್ತಿದ್ದರು. ಮತ್ತೆ ಕಲ್ಯಾಣ ಕಾರ್ಯಕ್ರಮವೂ ಸೇರಿದಂತೆ ಸಾಣೇಹಳ್ಳಿಯ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಅವರ ಕಾರ್ಯಕ್ರಮಗಳಲ್ಲಿ ನಾವೂ ಭಾಗವಹಿಸಿದ್ದೆವು. ಕಳೆದ ಮೂರ್ನಾಲ್ಕು ವರ್ಷಗಳಿಂದ ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲಿ ಇಂದು ಲಿಂಗೈಕ್ಯರಾಗಿರುವುದು ವಿಷಾದನೀಯ  ಎಂದು ಶ್ರೀಗಳು ಕಂಬನಿ ಮಿಡಿದಿದ್ದಾರೆ.

error: Content is protected !!