ಸಿರಿಗೆರೆ, ಮೇ 16- ಇಲ್ಲಿನ ತರಳಬಾಳು ಬೃಹನ್ಮಠದಲ್ಲಿ ಇದೇ ದಿನಾಂಕ 20ರ ಸೋಮವಾರ ನಡೆಯಬೇಕಿದ್ದ ಸದ್ಧರ್ಮ ನ್ಯಾಯಪೀಠದ ಕಾರ್ಯ ಕಲಾಪಗಳನ್ನು ಮುಂದೂಡಲಾಗಿದೆ. ಮಸ್ಕತ್ ಮತ್ತು ದುಬೈಗಳಲ್ಲಿ ನಡೆಯಲಿರುವ ಬಸವ ಜಯಂತಿ ಕಾರ್ಯಕ್ರಮಗಳಲ್ಲಿ ಜಗದ್ಗುರು ಡಾ|| ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಪಾಲ್ಗೊಳ್ಳುವ ನಿಟ್ಟಿನಲ್ಲಿ ಪ್ರವಾಸ ಕೈಗೊಂಡಿರುವ ಕಾರಣ, ನ್ಯಾಯಪೀಠದ ಕಾರ್ಯ ಕಲಾಪಗಳು ನಡೆಯುವುದಿಲ್ಲ ಎಂದು ನ್ಯಾಯಪೀಠದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
January 10, 2025