ನಗರದಲ್ಲಿ ಬೀದಿ ನಾಯಿ ಸ್ಥಳಾಂತರಿಸಿ

ಮಾನ್ಯರೇ, 

ಎಂ. ಸಿ. ಸಿ. ‘ಬಿ’ ಬ್ಲಾಕ್ ನ 11ನೇ ಮುಖ್ಯ ರಸ್ತೆ ಹಾಗೂ ಸುತ್ತ ಮುತ್ತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಸಾಕು ಪ್ರಾಣಿಗಳನ್ನು ಕಚ್ಚಿ ಸಾಯಿಸಿವೆ.  ಹಂದಿ ಮರಿಗಳನ್ನು ಬೇಟೆಯಾಡಿ ಕೊಂದು ಅರೆಬರೆ ಬಿಟ್ಟು ಹೋಗುತ್ತವೆ. ಅಲ್ಲದೆ ಮಕ್ಕಳ ಹಾಗೂ ದ್ವಿಚಕ್ರ ವಾಹನ ಚಲಾಯಿಸುವವರನ್ನು ಇವು ಬೆನ್ನಟ್ಟಿ ಹೋಗುವುದರಿಂದ ಅನಾಹುತಗಳಾಗಿವೆ.  ನಾನು  ಪ್ರಾಣಿ ದಯೆ ಉಳ್ಳವನಾದ್ದರಿಂದ ಈ ಬೀದಿ  ನಾಯಿಗಳನ್ನು  ಕೂಡಲೇ ಸೂಕ್ತ ಪ್ರದೇಶಕ್ಕೆ ಸ್ಥಳಾಂತರಿಸಲು  ಕೋರುತ್ತೇನೆ.


– ರಾಜಗೋಪಾಲ ವಾಂಜ್ರೆ. (ನಿವಾಸಿ)

error: Content is protected !!