ದಾವಣಗೆರೆ, ಮೇ 8 – ವೈಯಕ್ತಿಕತೆ, ಗೌಪ್ಯತೆ ಇತ್ಯಾದಿ ಕಾರಣಗಳಿಂದ ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಂತಿಮ ವರ್ಷಗಳ ಆರೋಗ್ಯಸ್ಥಿತಿ, ವಿಚಾರ ಸ್ಥಿತಿಯನ್ನು ಆರ್ಟಿಐ ಮುಖಾಂತರವೂ ಉತ್ತರಿಸದೇ ರಹಸ್ಯವಾಗಿಡುವ ಉದ್ದೇಶವೇನು ಎಂದು ಆಯಂಟಿ-ಕರೆಪ್ಷನ್, ಆಯಂಟಿ-ರಿಸರ್ವೇಷನ್ ಪೀಪಲ್-ವೆಲ್ಫೇರ್ (ಎಎಪಿ) ಪಕ್ಷ ಪ್ರಶ್ನಿಸಿದೆ.
ಅತ್ಯಾಚಾರಕ್ಕೊಳಗಾಗಿದ್ದ ಮಹಿಳೆ ಬ್ರೇವ್ಹಾರ್ಟ್ ಅಂತವರ ಬಗ್ಗೆ ಪ್ರತಿ ಗಂಟೆಗೂ ಆರೋಗ್ಯ ಸ್ಥಿತಿಯನ್ನು ಬಹಿರಂಗ ಪಡಿಸಿದ ಸರ್ಕಾರ ಅಟಲ್ ಅವರ ಆರೋಗ್ಯ ಸ್ಥಿತಿ ತಿಳಿಸಲು ಏನು ತೊಂದರೆಯಾಗಿತ್ತು ಎಂಬುದನ್ನು ಮೋದಿ ಸರ್ಕಾರ ತಿಳಿಸಬೇಕು ಎಂದು ಪಕ್ಷದ ಡಾ. ಶ್ರೀಧರ್ ಉಡುಪ ಆಗ್ರಹಿಸಿದ್ದಾರೆ.