ದಾವಣಗೆರೆ ಕ್ರಿಕೆಟ್ ಅಕಾಡೆಮಿ ತರಬೇತಿ ಶಿಬಿರ ಆರಂಭ

ದಾವಣಗೆರೆ ಕ್ರಿಕೆಟ್ ಅಕಾಡೆಮಿ ತರಬೇತಿ ಶಿಬಿರ ಆರಂಭ

ದಾವಣಗೆರೆ,ಏ.2-   ನಗರದ ಕ್ರೀಡಾಪಟುಗಳು   ಉತ್ತಮ ಕ್ರಿಕೆಟ್ ತರಬೇತಿಗೆ ಹಿಂದಿನಂತೆ  ಬೆಂಗಳೂರು ಅಥವಾ ಮೈಸೂರಿಗೆ ಹೋಗಿ ಹೆಚ್ಚು ವೆಚ್ಚ ಮಾಡುವ ಅವಶ್ಯಕತೆ ಈಗ ಇಲ್ಲವಾಗಿದ್ದು, ನಗರದಲ್ಲಿಯೇ ಅತ್ಯುತ್ತಮ ತರಬೇತಿ ದೊರೆಯುತ್ತಿದೆ ಎಂದು  ಕ್ರೀಡಾ ಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.

ದಾವಣಗೆರೆ ಕ್ರಿಕೆಟ್ ಅಕಾಡೆಮಿ ವತಿಯಿಂದ  ಪ್ರಾರಂಭವಾದ 23ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

ನುರಿತ ಬಿಸಿಸಿಐ ಹಾಗೂ ಕೆಎಸ್‌ಸಿಎ ಮಾನ್ಯತೆ ಪಡೆದಿರುವ ಕೋಚ್‌ಗಳು ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿದ್ದು ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.  ತರಬೇತಿ ವೆಚ್ಚವನ್ನು ಭರಿಸಲಾಗದೆ ಎಷ್ಟೋ ಕ್ರೀಡಾಪಟುಗಳು ಅವಕಾಶ ವಂಚಿತರಾಗಿದ್ದರು, ಈಗ ಸ್ಥಳೀಯವಾಗಿ ಉತ್ತಮ ಕ್ರಿಕೆಟ್ ತರಬೇತಿ ದೊರೆಯಲಿದ್ದು,  ಕ್ರೀಡಾಪಟುಗಳು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು. 

ಕುಸ್ತಿಯಲ್ಲಿ ಬಂಗಾರ ಪದಕಗಳನ್ನು ಪಡೆದಿರುವ ಸಿರಿಗೆರೆಯ ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕ  ಶ್ರೀರಾಮ ಪ್ರಭು ಮಾತನಾಡಿ, ಏನನ್ನಾದರೂ ಕಲಿಯಬೇಕು ಎಂದರೆ ಮೊದಲು ಆಸಕ್ತಿ ಇರಬೇಕು. ನಂತರ ದೇಹವನ್ನು ದಂಡಿಸಲು ತಯಾರಿರಬೇಕು. ಆಗ ಒಬ್ಬ ಕ್ರೀಡಾಪಟು ಅತ್ಯುತ್ತಮ ಕ್ರೀಡಾಪಟು ಆಗಲು ಸಾಧ್ಯ ಎಂದರು.

ನಗರದ ಕ್ರೀಡಾಪಟುಗಳು ತರಬೇತಿಗಾಗಿ ಬೆಂಗಳೂರು – ಮೈಸೂರಿಗೆ ಹೋಗುವ ಅವಶ್ಯಕತೆ ಇಲ್ಲ. ಈಗ  ನಗರದಲ್ಲಿಯೇ ನುರಿತ ಕೋಚ್‌ ಗಳಿಂದ ಅತ್ಯುತ್ತಮ ತರಬೇತಿ ಸಿಗುತ್ತಿದೆ ಎಂದು ಅವರು ಹೇಳಿದರು. 

 ವೇದಿಕೆಯಲ್ಲಿ  ಶಾಮನೂರು ತಿಪ್ಪೇಶ್,   ರವಿ,   ಮಂಜುನಾಥ,  ವಸಂತ್, ಕಾರ್ಪೊರೇಟರ್   ಉದಯ್  ಉಪಸ್ಥಿತರಿದ್ದರು. 

ಇಂದಿನಿಂದ ಬರುವ ಮೇ 31ರವರೆಗೆ ನಡೆಯುವ ಈ ಕ್ರಿಕೆಟ್ ತರಬೇತಿ ಶಿಬಿರದ ಕೋಚ್ ಗಳಾದ ಗೋಪಾಲಕೃಷ್ಣ,   ತಿಮ್ಮೇಶ್,   ಕುಮಾರ್, ಉಮೇಶ್ ಸಿರಿಗೆರೆ,   ವೆಂಕಟೇಶ್,   ಮನೋಜ್ ಕುಮಾರ್  ಕ್ರೀಡಾಪಟುಗಳಿಗೆ   ತರಬೇತಿಯನ್ನು ಪ್ರಾರಂಭಿಸಿದರು. 

ಶಿಬಿರದಲ್ಲಿ ಮಕ್ಕಳಿಗೆ ಅನುಕೂಲವಾಗುವ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಶಿಬಿರಕ್ಕೆ ಸೇರಿಸಲು ಇಚ್ಛಿಸುವವರು;  ಗೋಪಾಲ ಕೃಷ್ಣ  (7899610318),   ಅಂಬರ್ಕರ್ (99645 99160)   ತಿಮ್ಮೇಶ್ (98804 4060) ಅವರನ್ನು ಸಂಪರ್ಕಿಸಬಹುದು.

error: Content is protected !!