ಹರಪನಹಳ್ಳಿ, ಫೆ.12- ತಾಲ್ಲೂಕಿನ ಹೊಸಕೋಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಆರ್.ಸಿದ್ದೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕೆ.ನಾಗರಾಜ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೆ.ಆರ್.ಸಿದ್ದೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಬಿ.ಮಾನಸ ತಿಳಿಸಿದರು.
ನೂತನ ಅಧ್ಯಕ್ಷ ಕೆ.ಆರ್.ಸಿದ್ದೇಶ್ ಮಾತನಾಡಿ, ಸಂಘದಿಂದ ರೈತರಿಗೆ ಸಕಾಲದಲ್ಲಿ ಬೀಜ-ಗೊಬ್ಬರ, ಸಾಲ-ಸೌಲಭ್ಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಿ.ನಾಗಪ್ಪ, ಸದಸ್ಯರಾದ ಹೆಚ್.ಶರಣಪ್ಪ, ಎಸ್.ಜಾತಪ್ಪ, ಹೆಚ್.ಕೊಟ್ರೇಶಪ್ಪ, ಜಿ.ಎಂ.ವನಜಾಕ್ಷಿ, ಹೆಚ್.ಎಸ್.ಗೌರಮ್ಮ, ಆರ್.ಕೊಟ್ರೇಶ್, ಎಸ್.ಎ.ಜ್ಯೋತಿರ್ಲಿಂಗ, ಜಿ.ಸಿದ್ದೇಶ್, ಹೆಚ್.ರಾಮಪ್ಪ, ಸಂಘದ ಕಾರ್ಯನಿರ್ವಹಣಾಧಿಕಾರಿ ಕೆ.ಭೀಮಪ್ಪ, ಸಿಬಂದಿ ಇದ್ದರು.