ಶ್ರೀ ಜಗದ್ಗುರು ರೇಣುಕಾಚಾರ್ಯರ 36 ಅಡಿ ಎತ್ತರದ ಮೂರ್ತಿ ಲೋಕಾರ್ಪಣೆ
ಶ್ರೀ ರಂಭಾಪುರಿ ಪೀಠ (ಬಾಳೆಹೊನ್ನೂರು), ಫೆ.8- ಬಾಳೆಹೊನ್ನೂರು ಶ್ರೀ ರಂಭಾ ಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರ 33ನೇ ವರ್ಷದ ಪೀಠಾರೋಹಣ ವರ್ಧಂತಿ ಮಹೋ ತ್ಸವ, ಶ್ರೀ ಜಗದ್ಗುರು ರೇಣುಕಾಚಾರ್ಯರ 36 ಅಡಿ ಎತ್ತರದ ಮೂರ್ತಿ ಲೋಕಾರ್ಪಣೆ ಮಹಾಮಸ್ತ ಕಾಭಿಷೇಕ ಇದೇ ದಿನಾಂಕ 12 ಮತ್ತು 13 ರಂದು ಶಿಕಾರಿಪುರ ತಾಲ್ಲೂಕಿನ ಶ್ರೀ ಮಳೆ ಮಲ್ಲೇಶ್ವರಸ್ವಾಮಿ ಜಾಗೃತ ಸ್ಥಳ ಕಡೇನಂದಿಹಳ್ಳಿ ತಪೋಕ್ಷೇತ್ರ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ನಡೆಯುವುದು.
ದಿನಾಂಕ 12ರ ಸಂಜೆ 4 ಗಂಟೆಗೆ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಕಡೇನಂದಿಹಳ್ಳಿಯಿಂದ ಜರುಗಲಿದ್ದು, ಸಂಜೆ 7 ಗಂಟೆಗೆ ಜನ ಜಾಗೃತಿ ಧರ್ಮ ಸಮಾರಂಭ ಶ್ರೀ ರಂಭಾಪುರಿ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ನಡೆಯುವುದು.
ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸುವರು. ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿರುವ ಸಮಾರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರು ಶುಭ ಹಾರೈಸುವರು.
ಶ್ರೀ ರಂಭಾಪುರಿ ಪೀಠದ ವಾರ್ತಾ ಸಂಕಲನವನ್ನು ಅ.ಭಾ.ವೀರಶೈವ ಮಹಾಸಭಾದ ಅಧ್ಯಕ್ಷರೂ ಆದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಬಿಡುಗಡೆ ಮಾಡುವರು. ಹಿರೇಕೆರೂರು ಶಾಸಕ ಯು.ಬಿ.ಬಣಕಾರ, ಚಿತ್ರನಟ ಕೆ.ಸುಚೆಂದ್ರ ಪ್ರಸಾದ್, ಎನ್.ವಿ.ಈರೇಶ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಯಡೆಯೂರು ರೇಣುಕ ಶಿವಾಚಾರ್ಯರು, ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು, ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಎಮ್ಮಿ ಗನೂರಿನ ಡಾ.ವಾಮದೇವ ಮಹಾಂತ ಶಿವಾಚಾರ್ಯರು ಭಾಗವಹಿಸು ವರು. ಶ್ರೀ ಜಗದ್ಗುರು ರೇಣುಕಾ ಚಾರ್ಯ ಮಂಗಲ ಮೂರ್ತಿ ಲೋಕಾರ್ಪಣಾ ಸೇವಾ ಸಮಿತಿ ಪದಾಧಿಕಾರಿಗಳು ಸೇರಿದಂತೆ ಹಲವಾರು ಗಣ್ಯರಿಗೆ ಗುರು ರಕ್ಷೆ ನೀಡಿ ಆಶೀರ್ವದಿಸಲಾಗುವುದು.
ದಿನಾಂಕ 13ರ ಬೆಳಿಗ್ಗೆ
ಶ್ರೀ ಜಗದ್ಗುರು ರೇಣುಕಾಚಾರ್ಯ ಮಂಗಲ ಮೂರ್ತಿಗೆ 1008 ಕುಂಭಗಳಿಂದ ಮಹಾಮಸ್ತಕಾ ಭಿಷೇಕ ಜರುಗು ವುದು. ಸಂಜೆ 4 ಗಂಟೆಗೆ ಶ್ರೀ ಜಗದ್ಗುರು ರೇಣುಕಾ ಚಾರ್ಯರ ಬೃಹತ್ ಮೂರ್ತಿಯ ಲೋಕಾರ್ಪಣೆ ಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪನವರಿಂದ ನಡೆಯುವುದು. ಶ್ರೀ ರಂಭಾಪುರಿ ಡಾ. ವೀರಸೋ ಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪರಂಪರೆ ರಕ್ಷಣಾ ಧರ್ಮ ಸಮಾರಂಭ ಜರುಗ ಲಿದ್ದು, ಸಂಸದ ಬಿ.ವೈ. ರಾಘವೇಂದ್ರ ಅವರಿಗೆ
`ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಲಾಗುವುದು.
ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ಬಿ.ವೈ.ವಿಜಯೇಂದ್ರ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸುವರು. ದುಗ್ಲಿ-ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸುವರು. ಕೆ.ಎಸ್. ಗುರುಮೂರ್ತಿ, ಹೆಚ್.ಟಿ.ಬಳಿಗಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಶಿಲ್ಪಿಗಳಾದ ಕಾರ್ಕಳದ ಕೃಷ್ಣಾ ಆಚಾರ್ಯ, ಶಿವಮೊಗ್ಗದ ಜೀವನ್, ಗುತ್ತಿಗೆದಾರ ದೇವೇಂದ್ರಪ್ಪ ಪಿ.ಎಸ್. ಇವರಿಗೆ ವಿಶೇಷ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ರಾತ್ರಿ 9 ಗಂಟೆಗೆ ಹರ್ಲಾಪುರದ ಮೆಹಬೂಬ ಸಾಬ್, ಸಾಗರದ ಸುಹಾನಾ ಸೈಯದ್, ಚಿಕ್ಕಬೆಂಡಿಗೇರಿಯ ಲಿಂಗರಾಜ ಕಮ್ಮಾರ ಅವರಿಂದ ಸಂಗೀತ ಸೌರಭ ನಡೆಯುವುದು.