ದಾವಣಗೆರೆ, ಫೆ.8- ಬ್ರಾಹ್ಮಣ ಸಮಾಜ ಮಹಿಳಾ ವಿಭಾಗದಿಂದ ಶ್ರೀ ಪುರಂದರದಾಸರ ಹಾಗೂ ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವದ ಅಂಗವಾಗಿ ನಗರದ ರಿಂಗ್ ರಸ್ತೆಯಲ್ಲಿರುವ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಇದೇ ದಿನಾಂಕ 17ರ ಶನಿವಾರ ಶ್ರೀ ಪುರಂದರ ದಾಸರ ಸಮೂಹ ಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಗೆ ಬ್ರಾಹ್ಮಣ ಮಹಿಳೆಯರಲ್ಲದೇ ಸಾರ್ವಜನಿಕ ಎಲ್ಲಾ ಮಹಿಳೆಯರು ಭಾಗವಹಿಸಬಹುದು. ಭಾಗವಹಿಸುವ ತಂಡಗಳು ಇದೇ ದಿನಾಂಕ 15 ರೊಳಗೆ ಚಂದ್ರಶೇಖರ್ ಅಡಿಗ (9964027146), ನಳಿನಿ ಅಚ್ಯುತ್ (9886058866), ದಾಕ್ಷಾಯಿಣಿ ಮೂರ್ತಿ (9980529559) ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಬಹುದು.
December 23, 2024