ದಾವಣಗೆರೆ, ಫೆ.9- ನಗರದ ರೈಲ್ವೇ ನಿಲ್ದಾಣದ ಮುಂಭಾಗದ ಪಾರ್ಕಿಂಗ್ ಸ್ಥಳದಲ್ಲಿ ವಾರಸುದಾರರಿಲ್ಲದ ವಿವಿಧ ಕಂಪನಿಗಳ ಬೈಕುಗಳು ಪತ್ತೆಯಾಗಿವೆ. ಇವುಗಳ ಮೊತ್ತ 3.70 ಲಕ್ಷ ರೂ ಎಂದು ಅಂದಾಜಿಸಲಾಗಿದೆ.
ಪಾರ್ಕಿಂಗ್ ಸ್ಥಳದಲ್ಲಿದ್ದ ಬೈಕು ಗಳನ್ನು ಎಂಸಿಸಿಟಿಎನ್ಎಸ್ ತಂತ್ರಾಂ ಶದ ಮೂಲಕ ಪರಿಶೀಲಿಸಿ ವಿವಿಧ ಕಂಪನಿಗಳ 9 ಬೈಕುಗಳನ್ನು ಕಳ್ಳತನ ಮಾಡಿಕೊಂಡು ಬಂದು ಬಿಟ್ಟು ಹೋದಂತೆ ಕಂಡು ಬಂದಿದ್ದು, ವಾರಸುದಾರರು ಕಂಡುಬಾರದ ಕಾರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಈ ಬೈಕುಗಳ ಪೈಕಿ ಕೆಲವು ಬೈಕುಗಳು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನವಾಗಿರುವ ಬಗ್ಗೆ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ. ರೈಲ್ವೇ ಪೊಲೀಸ್ ಉಪ ಮಹಾ ನಿರೀಕ್ಷಕ ಡಾ.ಎಸ್.ಡಿ. ಶರಣಪ್ಪ, ಪೊಲೀಸ್ ಅಧೀಕ್ಷಕರಾದ ಡಾ. ಕೆ.ಎಸ್. ಸೌಮ್ಯಲತಾ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ರೈಲ್ವೇ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ರವಿಕುಮಾರ್ ನೇತೃತ್ವದಲ್ಲಿ ದಾವಣಗೆರೆ ರೈಲ್ವೇ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂತೋಷ್ ಎಂ.ಪಾಟೀಲ್ ಮುಂದಾಳತ್ವದಲ್ಲಿ ಎಎಸ್ಐ ನಾಗರಾಜ್, ಮುಖ್ಯ ಆರಕ್ಷಕರುಗಳಾದ ಶ್ರೀನಿವಾಸ್, ಟಿ.ಆರ್. ಚೇತನ್ ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.