ಪಟ್ಟಣದ ಹೊರವಲಯ ದಲ್ಲಿರುವ ಶ್ರೀ ಭದ್ರಾ ಕಾಳಿ ಸಮೇತ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಸಂಜೆ 6.30ಕ್ಕೆ ಕಡೇ ಕಾರ್ತಿಕೋತ್ಸವದ ಅಂಗವಾಗಿ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಇದಕ್ಕೂ ಮುನ್ನ ಸಂಜೆ 4 ಗಂಟೆಗೆ ವಾಸವಿ ಮಹಿಳಾ ಮತ್ತು ಯುವತಿಯರ ಸಂಘಗಳ ವತಿಯಿಂದ ವಾಸವಿ ಗಾನಾಮೃತದಿಂದ ಶಿವಾರಾಧನೆ (ಭಜನೆ) ನಡೆಸಿಕೊಡಲಿದ್ದಾರೆಂದು ದೇವಸ್ಥಾನ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಬಿ.ಚಿದಾನಂದಪ್ಪ ತಿಳಿಸಿದ್ದಾರೆ.
December 27, 2024