ಮಲೇಬೆನ್ನೂರು, ನ.20- ಶಾಲೆಗಳು ಶೈಕ್ಷಣಿಕ ಪ್ರಗತಿ ಸಾಧಿಸಲು ನಲಿಕಲಿ ಶಿಕ್ಷಕರಿಗೆ ಸಮಾಲೋಚನಾ ಸಭೆಯಲ್ಲಿ ಮಕ್ಕಳ ಕಲಿಕೆಯ ಬಗ್ಗೆ ಚರ್ಚಿಸಿ, ಹೊಸ ಪಾಠದ ವಿಧಾನವನ್ನು ತಿಳಿಸಲಾಗುತ್ತದೆ ಸಿಆರ್ಪಿ ಬಸವರಾಜಯ್ಯ ಹೇಳಿದರು.
ಅವರು ಸೋಮವಾರ ಹಳ್ಳಿಹಾಳ್ ಕ್ಯಾಂಪ್ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಕೊಕ್ಕನೂರು ಸಮೂಹ ಸಂಪನ್ಮೂಲ ವ್ಯಾಪ್ತಿಯ ನಲಿ – ಕಲಿ ಶಿಕ್ಷಕರ ಸಮಾಲೋಚನಾ ಸಭೆ ಮತ್ತು ಹೊರಾಂ ಗಣ ಕ್ರೀಡಾ ಸಾಮಾಗ್ರಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಖಾಸಗಿ ಸಂಸ್ಥೆಗಳ ಸಹಕಾರದಿಂದ ಗುಣಾತ್ಮಕ ಶಿಕ್ಷಣದತ್ತ ಮಕ್ಕಳು ನಿತ್ಯವೂ ಶಾಲೆಗೆ ಬರುವಂತಾಗಿದೆ ಎಂದರು.
ಹರಿಹರ ತಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಶರಣ್ಕುಮಾರ್ ಹೆಗಡೆ ಮಾತನಾಡಿ, ಬೆಂಗಳೂರಿನ ಇಂಡಿಯಾ ಸುಧಾರ್ ಮತ್ತು ಸಿನೋಪ್ಸಿಸ್ ಸಂಸ್ಥೆಯು ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಗಳಿಗೆ ನೆರವು ನೀಡಿದ್ದು, ನಮ್ಮ ತಾಲ್ಲೂಕಿನ 13 ಶಾಲೆಗಳಿಗೆ 739 ಛೇರ್ಗಳು, 90 ಟೇಬಲ್ಗಳನ್ನು ನೀಡಿದ್ದು, ಸಾವಿರ ಮಕ್ಕಳು ಇದರ ಲಾಭ ಪಡೆಯುತ್ತಿದ್ದಾರೆ. ಆ ಸಂಸ್ಥೆಯ ಮುಖ್ಯಸ್ಥರಾದ ಸಬಿತಾ, ಕಿರಣ್, ವಿನೋದ್ರವರ ಸೇವೆ ಸ್ಮರಣೀಯ ಎಂದರು.
ಶಿಕ್ಷಕರ ಸಂಘಟನೆಯ ಮಂಜಪ್ಪ ಬಿದರಿ, ವಿನೋದಮ್ಮ, ಜ್ಯೋತಿ, ಮಲ್ಲಿಕಾರ್ಜುನ್, ವಿ.ನಾಗೇಂದ್ರಪ್ಪ, ಮುಖ್ಯ ಶಿಕ್ಷಕ ನಾಗರಾಜ್, ಪ್ರಭು ತೇಲ್ಕರ್, ತಿಪ್ಪೇಸ್ವಾಮಿ ಮತ್ತಿತರರು ಈ ವೇಳೆ ಹಾಜರಿದ್ದರು.