ದಾವಣಗೆರೆ, ನ. 20 – ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ದಾವಣಗೆರೆ ಜಿಲ್ಲಾ ಘಟಕದ ಸರ್ವ ಸದಸ್ಯರ ಮಹಾ ಸಭೆಯು ನಗರದ ಪರಿಷತ್ತಿನ ಸಭಾಂಗಣದಲ್ಲಿ ನಡೆಯಿತು. ಕರ್ನಾಟಕ ಸುಗಮ ಸಂಗೀತ ಪರಿಷತ್ ದಾವಣಗೆರೆ ತಾಲ್ಲೂಕು ಅಧ್ಯಕ್ಷರಾಗಿ ಮಾಲತೇಶ್ ಕುಲಕರ್ಣಿ ಅವಿರೋಧ ಆಯ್ಕೆಯಾದರು.
ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಾಲಿಗ್ರಾಮ ಗಣೇಶ್ಶೆಣೈ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯು ಶ್ರೀಮತಿ ಸುಮ ಗುರುಬಸವರಾಜ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿದುಷಿ ಶ್ರೀಮತಿ ಸಂಗೀತಾ ರಾಘವೇಂದ್ರ ಸ್ವಾಗತಿಸಿದರು. ದಾವಣಗೆರೆ ತಾಲ್ಲೂಕು ಘಟಕದ ಪ್ರಧಾನ ಕಾರ್ಯ ದರ್ಶಿಯಾಗಿ ಶ್ರೀಮತಿ ಶಾಂತಾ ಪಿ.ಮೆಡ್ಲೇರಿ, ಖಜಾಂಚಿ ಶ್ರೀಮತಿ ರೇಣುಕಾ ರಾಮಣ್ಣ, ಸಮಿತಿ ಸದಸ್ಯರಾಗಿ ಶ್ರೀಮತಿ ಶೈಲಾ ವಿಜಯಕುಮಾರ್ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಶ್ರೀಮತಿ ಜಯಾ ಶ್ರೀನಿವಾಸ್, ಶ್ರೀಮತಿ ಸುಮ ಗುರುಬಸವರಾಜ್ ಆಯ್ಕೆಯಾದರು.
ಪರಿಷತ್ತಿನ ಹರಿಹರ ಘಟಕದ ಕೆ. ಜೈಮುನಿ, ಕೆ.ಎಂ.ವಿಶ್ವನಾಥಯ್ಯ, ಶ್ರೀಮತಿ ರಮ್ಯ ಕೆ.ಎ., ಶ್ರೀಮತಿ ಮಾಧುರಿ ಶೇಷಗಿರಿ, ಮುಂತಾದವರು ಉಪಸ್ಥಿತರಿ ದ್ದರು. ಶ್ರೀಮತಿ ಜಯಾ ಶ್ರೀನಿವಾಸ್ ವಂದಿಸಿದರು.