ಮಲೇಬೆನ್ನೂರು, ನ.20- ಭಾನುವಳ್ಳಿ ಗ್ರಾಮದ ಬಾವಿಕಟ್ಟಿ ಸರ್ಕಲ್ನಲ್ಲಿ ಸೋಮವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಸಂಭ್ರಮದಿಂದ ಅನಾವರಣ ಮಾಡಲಾಯಿತು. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಸೋಮಲಿಂಗೇಶ್ವರ ದೇವಖುಷಿ ನಿಪನಾಳ ಗುರುಗಳ ಸಾನ್ನಿಧ್ಯದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಂಡಿತು. ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್, ಇನ್ಸೈಟ್ಸ್ ಮುಖ್ಯಸ್ಥ ಜಿ.ಬಿ.ವಿನಯ್ಕುಮಾರ್, ಹೆಚ್.ಎಸ್.ಕರಿಯಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
December 30, 2024