ದಾವಣಗೆರೆ, ನ. 19- ಇತ್ತೀಚಿಗಷ್ಟೇ ಪ್ರಧಾನಮಂತ್ರಿಗಳ ಆಶಯದಂತೆ ನವದೆಹಲಿಯಲ್ಲಿ ನಡೆದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಕೊನೆಯ ಕಾರ್ಯಕ್ರಮ `ಮೇರಾ ಮಿಟ್ಟಿ – ಮೇರಾ ದೇಶ’ (ನನ್ನ ಮಣ್ಣು – ನನ್ನ ದೇಶ) ಎಂಬ ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು `ನೆಹರು ಯುವ ಕೇಂದ್ರ’ ಮತ್ತು `ರಾಷ್ಟೀಯ ಸೇವಾ ಯೋಜನೆ’ ವತಿಯಿಂದ ಆಯ್ಕೆಗೊಂಡ ನಗರದ ಬಿ.ಎಸ್. ಚನ್ನಬಸಪ್ಪ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಾದ ಆರ್.ಎಸ್. ಆಕರ್ಷ್, ಜಿ.ಕೆ. ಕರಿಬಸಪ್ಪ, ಎಂ.ಹೆಚ್. ನಿವೇದಿತ, ಜಿ.ಯು. ಪಲ್ಲವರಿ ಅವರನ್ನು ಕಾಲೇಜಿನ ಅಧ್ಯಕ್ಷ ಬಿ.ಸಿ. ಶಿವಕುಮಾರ್, ಪ್ರಾಂಶುಪಾಲ ಎಂ.ಸಿ. ಗುರು, ಎನ್ಸೆಸ್ಸೆಸ್ ಅಧಿಕಾರಿ ಪಿ. ಅಣ್ಣೇಶ್ ಅಭಿನಂದಿಸಿದ್ದಾರೆ.