ದಾವಣಗೆರೆ,ಅ.8- ರಾಜ್ಯ ಸರ್ಕಾರ ಉಚಿತ ಯೋಜನೆ ಘೋಷಿಸಿ ಈಗ `ಇಂಗು ತಿಂದ ಮಂಗನ ಹಾಗೆ’ ಇದನ್ನು ಸರಿದೂಗಿಸಲು ಸಂಪನ್ಮೂಲ ಕ್ರೋಢೀಕರಣಕ್ಕೆ `ಮದ್ಯ ಭಾಗ್ಯ’ ಯೋಜನೆ ಜಾರಿಗೆ ತರಲು ಹೊರಟಿದೆ ಎಂದು ಆಮ್ ಆದ್ಮಿ ಪಾರ್ಟಿ ಟೀಕಿಸಿದೆ. ಕಳೆದ 8 ವರ್ಷಗಳಿಂದ ದೆಹಲಿ ಆಪ್ ಸರ್ಕಾರ ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಪ್ರಯಾಣ, ಆರೋಗ್ಯ ಸೇವೆ ಮತ್ತು ಶಿಕ್ಷಣಕ್ಕೆ ಒತ್ತು ನೀಡಿದೆ. ಆದರೆ ಆರ್ಥಿಕವಾಗಿ ಸಬಲರಾಗಲು ಮದ್ಯಪಾನದಂತಹ ಕೆಟ್ಟ ನಿರ್ಧಾರ ತೆಗೆದುಕೊಂಡಿಲ್ಲ. ಅಲ್ಲದೇ ಈ ಹಿಂದೆ ಕಾಂಗ್ರೆಸ್ ಸರ್ಕಾರ ಮಾಡಿದ್ದ ಎಲ್ಲ ಸಾಲವನ್ನೂ ತೀರಿಸಿ ಈಗ ಸಾಲ ಮುಕ್ತ ರಾಜ್ಯವಾಗಿದೆ. ಆದ್ದರಿಂದ ರಾಜ್ಯ ಸರ್ಕಾರವು ಗ್ರಾಮೀಣ ಪ್ರದೇಶದಲ್ಲಿ ಮದ್ಯದಂಗಡಿಗಳನ್ನು ತೆರೆಯುವುದನ್ನು ಬಿಟ್ಟು, ಸರಿಯಾದ ಮಾರ್ಗಗಳಲ್ಲಿ ರಾಜ್ಯದ ಖಜಾನೆ ತುಂಬಿಸಿಕೊಳ್ಳಬೇಕು ಎಂದು ಪಕ್ಷದ ಜಿಲ್ಲಾ ಅಧ್ಯಕ್ಷ ಕೆ.ಎಸ್. ಶಿವಕುಮಾರಪ್ಪ ಮತ್ತು ರಾಜ್ಯ ಜಂಟಿ ಕಾರ್ಯದರ್ಶಿ ಕೆ.ಎಲ್.ರಾಘವೇಂದ್ರ ಒತ್ತಾಯಿಸಿದ್ದಾರೆ.
November 25, 2024