ದಾವಣಗೆರೆ, ಸೆ.21- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಾರಿ ಶಕ್ತಿ ವಂದನ್ ಅಧಿನಿಯಮ ಅಥವಾ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಬಿಜೆಪಿ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ಮಹಾನಗರ ಪಾಲಿಕೆ ಎದುರು ಬುಧವಾರ ವಿಜಯೋತ್ಸವ ಆಚರಿಸಿದರು.
ಪಾಲಿಕೆ ಕಚೇರಿ ಎದುರು ಜಮಾಯಿಸಿದ ಪಾಲಿಕೆಯ ಬಿಜೆಪಿ ಸದಸ್ಯರು, ಜಿಲ್ಲಾ ಬಿಜೆಪಿ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು, ನಾರಿಯರಿಗೆ ರಾಜಕೀಯ ಚೈತನ್ಯ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ವೇಳೆ ಮಹಾನಗರ ಪಾಲಿಕೆ ಉಪಮಹಪೌರರಾದ ಯಶೋಧ ಯಗ್ಗಪ್ಪ, ವಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಪಾಲಿಕೆ ಸದಸ್ಯರಾದ ಆರ್. ಶಿವಾನಂದ, ಕೆ.ಎಂ. ವೀರೇಶ್, ಜೆ.ಎನ್. ಶ್ರೀನಿವಾಸ್, ಗಾಯತ್ರಿಬಾಯಿ ಖಂಡೋಜಿ ರಾವ್, ವೀಣಾ ನಂಜಪ್ಪ, ಗೌರಮ್ಮ ಗಿರೀಶ್, ಪಕ್ಷದ ಮುಖಂಡರಾದ ಸುರೇಶ್ ಗಂಡಗಾಳೆ, ಜೈಪ್ರಕಾಶ್ ಬಾಬು, ಪದ್ಮನಾಭ ಶೆಟ್ಟಿ, ಶಾಮನೂರು ರಾಜಪ್ಪ, ಉಷಾ ಪಿ. ಶೆಟ್ಟಿ, ಸೌಮ್ಯ ಕಾಕಂಡೆ, ಗಾಯತ್ರಿ ಮತ್ತಿತರರಿದ್ದರು.