ವಿಘ್ನೇಶ್ವರನನ್ನು ಪೂಜಿಸಿದರೆ 33 ಕೋಟಿ ದೇವರುಗಳನ್ನು ಪೂಜಿಸಿದ ಫಲ ಸಿಗುತ್ತದೆ

ವಿಘ್ನೇಶ್ವರನನ್ನು ಪೂಜಿಸಿದರೆ 33 ಕೋಟಿ ದೇವರುಗಳನ್ನು ಪೂಜಿಸಿದ ಫಲ ಸಿಗುತ್ತದೆ

ಹರಪನಹಳ್ಳಿ : ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ

ಹರಪನಹಳ್ಳಿ, ಸೆ.19- ವಿಘ್ನೇಶ್ವರನನ್ನು ಪೂಜಿಸಿದರೆ 33 ಕೋಟಿ ದೇವರುಗಳನ್ನು ಪೂಜಿಸಿದ ಫಲ ಸಿಗುತ್ತದೆ ಎಂದು ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಈಶ್ವರ ದೇವಸ್ಥಾನದ ಆವರಣದಲ್ಲಿ  ಶ್ರೀ ಈಶ್ವರ ವಿನಾಯಕ ಸಮಿತಿ ವತಿಯಿಂದ 33ನೇ ವರ್ಷದ ಶ್ರೀ ವಿಘ್ನೇಶ್ವರ ಪ್ರತಿಷ್ಠಾಪನೆ ಹಾಗೂ ಶ್ರೀ ರೇಣುಕಾ ಯಲ್ಲಮ್ಮ ಕಥಾ ಪ್ರದರ್ಶನ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

ಯಾವುದೇ ಕಾರ್ಯಗಳು ಮಂಗಳ ಕಾರ್ಯ ಸಮಾರಂಭಗಳಿರಲಿ ಗಣಪತಿಗೆ ಮೊದಲ ಪೂಜೆ. ಎಲ್ಲ ಹಬ್ಬಗಳನ್ನು ನಮ್ಮ ಮನೆಗಳಲ್ಲಿ ಆಚರಣೆ ಮಾಡಿದರೆ, ಗಣೇಶ ಹಬ್ಬವನ್ನು ಮಾತ್ರ ಸಾರ್ವತ್ರಿಕವಾಗಿ ಸರ್ವ ಸಮುದಾಯದವರು ಜಾತ್ಯತೀತವಾಗಿ ಆಚರಿಸುತ್ತಾರೆ. ಗಣಪತಿ ಗಣಗಳಿಗೆ ಒಡೆಯ. ಗಣಪತಿಯ ವ್ಯಕ್ತಿತ್ವ ವಿಶೇಷವಾಗಿರುವಂತದ್ದು. ನಾವು ಮಾಡುವ ಪ್ರತಿ ಕೆಲಸಗಳಿಗೂ ವಿಘ್ನ ಬಾರದಿರಲಿ ಎಂದು ವಿಘ್ನೇಶ್ವರನನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಗಣೇಶನ ಕಣ್ಣುಗಳು ಏಕಾಗ್ರತೆ ಮತ್ತು ಸೂಕ್ಷತೆಯನ್ನು ಬಿಂಬಿಸಿದರೆ ಗಣೇಶನ ಹೊಟ್ಟೆ ಜೀವನದಲ್ಲಿ ಬರುವ ಎಲ್ಲ ಸನ್ನಿವೇಶಗಳನ್ನು ಜೀರ್ಣಿಸಿಕೊಳ್ಳುವ ಪ್ರತೀಕವಾಗಿದೆ ಎಂದು ಶ್ರೀಗಳು ವಿವರಿಸಿದರು.

ಈ ವೇಳೆ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಮುಖಂಡರಾದ ಎಚ್.ರುದ್ರೇಶ್, ಅನಿಲ ಚಿಂದಿ, ಪ್ರಮೋದ ಎ.ಎಂ.ಜಿ, ಜೀವನ್ ಅಂಬ್ಲಿ, ಷಣ್ಮುಖ ಎಸ್.ಎಂ, ದೇವರಾಜ, ವಿನಾಯಕ ಎನ್, ಚಿರಂಜೀವಿ ಎನ್, ಕಾಶಿನಾಥ ಎನ್, ನವೀನ್ ಕುಮಾರ್. ಎಚ್, ವಿವೇಕ ಎಂ, ಅಳವಂಡಿ ಶಿವರಾಜ್, ರಾಜೇಂದ್ರ ಕೆ, ದೇವೇಂದ್ರ ಕೆ. ವೀರೇಶ್ ಬಡೆಗೇರ್, ವೀರೇಶ ಮೆರವಣಿಗೆ, ಅರುಣ ಚಿಂದಿ, ಕಾರ್ತಿಕ ಎಚ್, ಮಹಾತೇಂಶ ಎಚ್, ಹಾಲೇಶ್ ಎಚ್, ಯು.ಎಂ. ಸಂತೋಷ್, ಯು.ಎಂ. ಪ್ರವೀಣ್, ಮಂಜುನಾಥ್ ಎನ್, ಅಗಸರ ಅಜ್ಜಯ್ಯ, ಹನುಮಂತಪ್ಪ, ಕೌಟಿ ಸುಜನ್, ವಿರೂ ಹಿಂದೂಸ್ತಾನಿ, ಕೌಟಿ ಮಂಜುನಾಥ್, ಎಸ್.ಎಂ. ಚನ್ನವೀರ, ಎಸ್.ಎಂ. ಕೋಟ್ರೇಶ್ ಸೇರಿದಂತೆ ಇತರರು ಇದ್ದರು.

error: Content is protected !!