ಒಂದೇ ಸೂರಿನಡಿ ಕೇಂದ್ರ – ರಾಜ್ಯ ಸರ್ಕಾರಗಳ ಸಾರ್ವಜನಿಕ ಸೇವೆ ನೀಡುತ್ತಿರುವ ಅಂಚೆ ಇಲಾಖೆ

ಒಂದೇ ಸೂರಿನಡಿ ಕೇಂದ್ರ – ರಾಜ್ಯ ಸರ್ಕಾರಗಳ ಸಾರ್ವಜನಿಕ ಸೇವೆ ನೀಡುತ್ತಿರುವ ಅಂಚೆ ಇಲಾಖೆ

ಜಗಳೂರಿನ `ಅಂಚೆ ಜನ ಸಂಪರ್ಕ ಅಭಿಯಾನ’ದಲ್ಲಿ ಅಂಚೆ ನಿರೀಕ್ಷಕ ವೇಣುಗೋಪಾಲ್

ಜಗಳೂರು, ಸೆ. 15- ಭಾರತೀಯ ಅಂಚೆ ಇಲಾಖೆ  ದಾವಣಗೆರೆ ವಿಭಾಗದ ವತಿಯಿಂದ  ಇಲ್ಲಿನ ಅಂಚೆ ಕಚೇರಿಯಲ್ಲಿ `ಅಂಚೆ ಜನ ಸಂಪರ್ಕ ಅಭಿಯಾನ’  ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾರ್ವಜನಿಕ ಸೇವೆಗಳು ಒಂದೇ ಸೂರಿನಡಿಯಲ್ಲಿ ಒದಗಿಸುವುದರ ಮೂಲಕ ದಾವಣಗೆರೆ ಅಂಚೆ ವಿಭಾಗವು ಯಶಸ್ವಿಯಾಗಿದೆ. 

ಈ ಅಭಿಯಾನದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಖಾತೆಗಳನ್ನು ತೆರೆದಿದ್ದು,   ವಿವಿಧ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿ, ಜನರ ಮನೆ ಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸುವಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಅಂಚೆ ನಿರೀಕ್ಷಕ ವೇಣುಗೋಪಾಲ್ ತಿಳಿಸಿದರು.

ದಾವಣಗೆರೆ ಅಂಚೆ ಅಧೀಕ್ಷಕ ಚಂದ್ರಶೇಖರ್ ಮಾತನಾಡಿ, ಈಗಿನ ಆಧುನಿಕ ಜಗತ್ತಿಗೆ ತಕ್ಕಂತೆ ಅಂಚೆ ಇಲಾಖೆಯೂ ಬ್ಯಾಂಕಿಂಗ್ ವ್ಯವಹಾರದಲ್ಲಿ ಅಭಿವೃದ್ಧಿ ಹೊಂದಿದ್ದು, ಸಾಮಾನ್ಯ ಜನರಿಗೆ ತಮ್ಮ ಮನೆ ಬಾಗಿಲಿಗೆ, ಐಪಿಪಿಬಿ, ಡಿಜಿಟಲ್ ಅಕೌಂಟ್‌ಗಳನ್ನು ಮಾಡಿ ಕೊಡುವುದರ ಮೂಲಕ ಎಟಿಎಂ ಮತ್ತು ಫೋನ್ ಪೇ  ಮುಂತಾದ ಆಧುನಿಕ ವ್ಯವಹಾರಗಳನ್ನು ಅಂಚೆ ಇಲಾಖೆಯು ಒದಗಿಸಿದೆ. ಅನ್ನಭಾಗ್ಯ, ಗೃಹಲಕ್ಷ್ಮಿ, ಪಿಎಂ ಕಿಸಾನ್  ಯೋಜನೆಗಳ ಸೌಲಭ್ಯಗಳನ್ನೂ ಜನರಿಗೆ ಒದಗಿಸುತ್ತಿದೆ ಎಂದರು.

ಜನ ಸಂಪರ್ಕ ಅಭಿಯಾನವನ್ನು ಜಗಳೂರಿನಲ್ಲಿ ಏರ್ಪಡಿಸಿದ್ದರಿಂದ ಸ್ಥಳೀಯ ಗ್ರಾಹಕರಿಗೆ ಅನೇಕ ಉಪಯುಕ್ತ ಸೇವೆಗಳನ್ನು ನೀಡುವುದರ ಮೂಲಕ  ಜನರ ಮನಸ್ಸಿಗೆ ಇನ್ನಷ್ಟು ಹತ್ತಿರವಾಗುವಲ್ಲಿ ಅಂಚೆ ಇಲಾಖೆ ಯಶಸ್ವಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಿಪಿಐ ಶ್ರೀನಿವಾಸರಾವ್ ಮಾತನಾಡಿ, ಅಂಚೆ ಕಚೇರಿಯಲ್ಲಿ ಉಳಿತಾಯ ಮಾಡಿದರೆ ಇಟ್ಟ ಹಣಕ್ಕೆ ಲೋಪವಾಗು ವುದಿಲ್ಲ.   ನಿಮ್ಮ ಮಕ್ಕಳ ಭವಿಷ್ಯಕ್ಕೆ ಉಳಿತಾಯ ಅವಶ್ಯಕ ಎಂದರು. 

ಮಾರ್ಕೆಟಿಂಗ್ ಮ್ಯಾನೇಜರ್ ಸಂತೋಷ್ ಮಾತನಾಡಿ, ಗೋಲ್ಡ್ ಬಾಂಡ್ ಅವಧಿ 8 ವರ್ಷಕ್ಕೆ ಎರಡೂವರೇ ಪರ್ಸೆಂಟ್ ಬಡ್ಡಿ ಹಾಕಿ ಕೊಡಲಾಗುವುದು ಮತ್ತು ಎನ್‌ಪಿಎಸ್‌ನಂತಹ ವಿವಿಧ ಸೌಲಭ್ಯಗಳನ್ನು ಒಂದೇ ಸೂರಿನಡಿಯಲ್ಲಿ ಒದಗಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎ.ಕೆ.ಬಸಪ್ಪ ಪೋಸ್ಟ್ ಮಾಸ್ಟರ್ ಜಗಳೂರು, ಸುರೇಶ್ ತಾಲ್ಲೂಕು ಕಚೇರಿ ಶಿರಸ್ತೇದಾರರು, ಶ್ರೀನಿವಾಸ್ ರಾವ್ ಆರಕ್ಷಕ ನಿರೀಕ್ಷಕರು, ರಾಜೇಶ್ವರಿ ಪೂಜಾರ್ ಪ್ರಾಂಶುಪಾಲರು, ರೇಖಾ ಸಿಡಿಪಿಒ ಇಲಾಖೆ, ಹರ್ಷ ಕೃಷಿ ಇಲಾಖೆ,    ರೇವಣ್ಣ ಹೊಸಕೆರೆ, ಗುರುಪ್ರಸಾದ್ ಸಹಾಯಕ ಅಂಚೆ ಅಧೀಕ್ಷಕರು ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!