ಮಲೇಬೆನ್ನೂರು, ಸೆ. 15- ಕಡಾರನಾಯ್ಕನಹಳ್ಳಿ ಗ್ರಾಮ ಪಂಚಾಯತಿ ನೂತನ ಉಪಾಧ್ಯಕ್ಷರಾಗಿ ಹೊಸಪಾಳ್ಯದ ಪರಶುರಾಮ್ ಅವರು ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಉಪಾಧ್ಯಕ್ಷ ಸ್ಥಾನ ಎಸ್ಟಿಗೆ ಮೀಸಲಾಗಿತ್ತು. ಚುನಾವಣೆ ವೇಳೆ ಉಪಾಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣೆ ನಡೆದಿರಲಿಲ್ಲ. ಎಸ್ಟಿ ಮೀಸಲಾತಿ ಬದಲಾಗಿ ಎಸ್ಸಿ ಮೀಸಲಾತಿ ನೀಡುವಂತೆ ಗ್ರಾ.ಪಂ. ಸದಸ್ಯರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದರು. ಆ ಪ್ರಕಾರ ಉಪಾಧ್ಯಕ್ಷ ಸ್ಥಾನವನ್ನು ಎಸ್ಸಿಗೆ ಮೀಸಲು ಮಾಡಿ ಶುಕ್ರವಾರ ಚುನಾವಣೆ ನಡೆಸಲಾಯಿತು. ಪಶು ವೈದ್ಯಕೀಯ ಇಲಾಖೆಯ ಡಾ. ಸಿದ್ದೇಶ್ ಅವರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಗ್ರಾ.ಪಂ. ಅಧ್ಯಕ್ಷೆ ಮಂಜಮ್ಮ, ಸದಸ್ಯರಾದ ವಿ. ಕುಬೇರಪ್ಪ, ಎಂ. ಭರಮಗೌಡ ಪಾಟೀಲ್, ಜಿ. ಬಸವನಗೌಡ, ಗಿರಿಜಮ್ಮ, ಹುಸೇನ್ ಸಾಬ್, ಕಾಮಾಕ್ಷಮ್ಮ, ರೇಖಮ್ಮ, ಅನಿತಾ ಸೇರಿದಂತೆ ಕೆ.ಎನ್. ಹಳ್ಳಿ ಹಾಗೂ ಹೊಸಪಾಳ್ಯ ಗ್ರಾಮದ ಮುಖಂಡರು ಈ ವೇಳೆ ಹಾಜರಿದ್ದರು.