ಗೀತಾಂಜಲಿ ಚಿತ್ರಮಂದಿರದ ಪಕ್ಕದಲ್ಲಿರುವ ಶ್ರೀ ಲಿಂಗೇಶ್ವರ ಸ್ವಾಮಿ ರಥೋತ್ಸವವು ಇಂದು ಜರುಗಲಿದೆ. ಅಶೋಕ ಟಾಕೀಸ್ ರೈಲ್ವೇ ಗೇಟ್ ಬಂದ್ ಆಗಿರುವ ಪ್ರಯುಕ್ತ ರಥೋತ್ಸವದ ಮಾರ್ಗ ಬದಲಾಯಿಸಲಾಗಿದೆ.
ಬೆಳಿಗ್ಗೆ 9-30 ಗಂಟೆಗೆ ರಥೋತ್ಸವವು ದೇವಸ್ಥಾನದಿಂದ ಹೊರಟು, ಗಾಂಧಿ ಸರ್ಕಲ್, ಜಯದೇವ ಸರ್ಕಲ್, ಲಾಯರ್ ರಸ್ತೆ, ಎಲಿಗಾರ್ ಶಿವಪ್ಪ ರಸ್ತೆ ಮುಖಾಂತರ ಪಿ.ಬಿ.ರಸ್ತೆ ತಲುಪಿ ಗಾಂಧಿ ಸರ್ಕಲ್ ಮೂಲಕ ದೇವಸ್ಥಾನ ತಲುಪಲಿದೆ ಎಂದು ಶ್ರೀ ಲಿಂಗೇಶ್ವರ ಸ್ವಾಮಿ ದೇವಸ್ಥಾನ ಸಂಘದ ಪ್ರಕಟಣೆ ತಿಳಿಸಿದೆ.