ಬಸವ ಕೇಂದ್ರ, ಶ್ರೀ ಮುರುಘರಾಜೇಂದ್ರ ವಿರಕ್ತಮಠ, ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಆಶ್ರಯದಲ್ಲಿ ಶ್ರಾವಣ ಮಾಸದ 113ನೇ ಕಾರ್ಯಕ್ರಮ `ನಿತ್ಯ ಕಲ್ಯಾಣ’ದ ಸಮಾರೋಪ ಹಾಗೂ ಶರಣ ಚರಿತಾಮೃತ ಪ್ರವಚನ ಮಂಗಲ ಸಮಾರಂಭವು ಇಂದು ಸಂಜೆ 6.30 ಕ್ಕೆ ವಿರಕ್ತಮಠದದಲ್ಲಿ ನಡೆಯಲಿದೆ. ಸಾನ್ನಿಧ್ಯವನ್ನು ಶ್ರೀ ಬಸವಪ್ರಭು ಸ್ವಾಮೀಜಿ ವಹಿಸುವರು. ಡಾ. ಎನ್.ಬಿ. ನಾಗರಹಳ್ಳಿ ಪ್ರವಚನ ನುಡಿಗಳನ್ನಾಡುವರು. ಮುಖ್ಯ ಅತಿಥಿಗಳಾಗಿ ಜಿ.ಎಂ. ಸಿದ್ದೇಶ್ವರ, ಕೆ.ಎಸ್. ಬಸವಂತಪ್ಪ, ಡಾ. ಸಿ.ಆರ್. ನಸೀರ್ ಅಹಮದ್, ಚಿಗಟೇರಿ ಜಯದೇವ ಆಗಮಿಸುವರು. ಕಾರ್ಯಕ್ರಮದಲ್ಲಿ ಬಸವ ಕಲಾಲೋಕದ ಅರುಣ, ವಾಗೀಶ ವಚನ ಗಾಯನ ನಡೆಸಿಕೊಡುವರು.
January 3, 2025