ಆಶ್ರಯ ಆಸ್ಪತ್ರೆ ರಸ್ತೆಯ ಅವ್ಯವಸ್ಥೆ ಕ್ರಮ ಕೈಗೊಳ್ಳಲು ಪಾಲಿಕೆಗೆ ಆಗ್ರಹ

ಆಶ್ರಯ ಆಸ್ಪತ್ರೆ ರಸ್ತೆಯ ಅವ್ಯವಸ್ಥೆ  ಕ್ರಮ ಕೈಗೊಳ್ಳಲು ಪಾಲಿಕೆಗೆ ಆಗ್ರಹ

ದಾವಣಗೆರೆ, ಜು.6- ನಗರದ ಎಂ.ಸಿ.ಸಿ `ಎ’ ಬ್ಲಾಕ್‌ನಲ್ಲಿರುವ ಆಶ್ರಯ ಹಾಸ್ಪಿಟಲ್ ಮತ್ತು ಪಾಲಿಕೆ ವಲಯ ಕಚೇರಿ ಇರುವ ರಸ್ತೆಯನ್ನು  ಶೀಘ್ರವಾಗಿ ದುರಸ್ತಿ ಮಾಡುವಂತೆ ಅಲ್ಲಿನ ನಿವಾಸಿಗಳು ಪಾಲಿಕೆ ಆಯುಕ್ತರನ್ನು ಒತ್ತಾಯಿಸಿದ್ದಾರೆ. ಈ ರಸ್ತೆಯ ಮಣ್ಣನ್ನು ಮಾರ್ಚ್‌ನಲ್ಲಿ ಅಗೆದು ರಸ್ತೆಯಲ್ಲಿ ಹರಡಿದ್ದಾರೆ. ಗುಂಡಿಗಳು ಹಾಗೆಯೇ ಇವೆ. ಜೂನ್ ತಿಂಗಳು ಕಳೆದರೂ ಬರಿ ಯುಜಿಡಿ ಕೆಲಸ ಮಾತ್ರ ಆಗಿರುತ್ತದೆ. 

ರಸ್ತೆಯಲ್ಲಿ ಗುಂಡಿಗಳು ಹಾಗು ಮಣ್ಣಿನ ರಾಶಿ ಇರುವುದರಿಂದ ಗ್ಯಾಸ್ ಸಿಲಿಂಡರ್ ಕೊಡುವವರಾಗಲೀ, ಪೋಸ್ಟ್ ಮ್ಯಾನ್, ಹಾಲಿನವರು ಹೀಗೆ ದಿನ ನಿತ್ಯದ ವಸ್ತುಗಳನ್ನು ನೀಡುವವರು ಮನೆಗಳಿಗೆ ತಲುಪಿಸಲು ಕಷ್ಟವಾಗುತ್ತಿದೆ.  ಈಗ ಮಳೆಗಾಲವೂ ಆರಂಭವಾಗಿರುವುದರಿಂದ   ರಸ್ತೆಯ ಗುಂಡಿಗಳಲ್ಲಿ ನೀರು ತುಂಬಿದೆ. ಮಣ್ಣೆಲ್ಲ ಕೆಸರಾಗಿದೆ. ಕಾಲ್ನಡಿಗೆಯಲ್ಲಿ ಓಡಾಡಲು ಕಷ್ಟ ಸಾಧ್ಯವಾಗಿದೆ.ಇನ್ನು ವಾಹನಗಳಂತೂ ಕೆಸರಿನಲ್ಲಿ ಹೂತುಬಿಡುತ್ತಿವೆ. 

ಮಾಡಬೇಕಾದ ಕೆಲಸವನ್ನು ಹೀಗೆ ಅರ್ಧದಲ್ಲಿಯೇ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಮಾಡುವುದು ತಪ್ಪಲ್ಲವೇ? ಎಂದು  ಪ್ರಶ್ನಿಸಿರುವ ಅಲ್ಲಿನ ನಿವಾಸಿಗಳಾದ ಚಾರ್ಟರ್ಡ್ ಅಕೌಂಟೆಂಟ್ ಎ.ಕಿರಣ್‌ಕುಮಾರ್ ಮತ್ತು ಡಾ.ಶ್ರೀಶೈಲ ಬ್ಯಾಡಗಿ ಅವರುಗಳು  ರಸ್ತೆಯ ಕೆಲಸವನ್ನು ಶೀಘ್ರವಾಗಿ ಪೂರೈಸುವಂತೆ ಆಗ್ರಹಿಸಿದ್ದಾರೆ. 

error: Content is protected !!