ಜೂನ್ 5 ನಾವು ಜಾಗೃತರಾಗುವ ದಿನ. ಅಂದರೆ ಅಂದು ವಿಶ್ವ ಪರಿಸರ ದಿನ. ಈ ದಿನದಂದು ನಾವೊಂದಿಷ್ಟು ಸಂಕಲ್ಪ ಮಾಡೋಣವೆಂದು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ.
* ಮಕ್ಕಳು ಪ್ರಕೃತಿಯ ಜೊತೆ ಬೆರೆತು ಬೆಳೆಯುವಂತೆ ಮಾಡೋಣ.
* ಪರಿಸರ ಮಾಲಿನ್ಯ ಮಾಡುವುದನ್ನು ನಾವು ನಿಯಂತ್ರಿಸೋಣ.
* ಸೌರಶಕ್ತಿ ಬಳಕೆಯ ಮೂಲಕ ವಾಹನ ಚಾಲನೆ ಮತ್ತು ವಿದ್ಯುದ್ದೀಪಗಳ ಅಳವಡಿಕೆ ಮಾಡಿಕೊಂಡು ಪರಿಸರ ಸ್ನೇಹಿಯಾಗೋಣ.
* ಮುಂದಿನ ಪೀಳಿಗೆಯ ಬದುಕುವಿಕೆಯ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸೋಣ.
* ಹಸಿರುಭರಿತ ಪ್ರಪಂಚವನ್ನು ನಮ್ಮದಾಗಿಸಿಕೊಳ್ಳೋಣ.
* ಜನತೆಯಲಿ ಜವಾಬ್ದಾರಿಯುತ ಭಾವವನ್ನು ಮೂಡಿಸೋಣ.
* ಪರಿಸರದ ಅಂಶಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿಸೋಣ.
* ಪರಿಸರ ಸಂರಕ್ಷಣೆ ಕುರಿತ ಸರಳ ಮಾಹಿತಿಗಳನ್ನು ಎಲ್ಲರಲ್ಲಿಯೂ ಹಂಚಿಕೋಳ್ಳೋಣ.
* ಜನತೆ ಪ್ರಕೃತಿಯ ಒಂದು ಭಾಗ ಮತ್ತು ಅದರ ಅವಲಂಬಿಗಳು ಎಂಬುದನ್ನು ಅರ್ಥೈಸೋಣ.
* ಸಕ್ರಿಯವಾಗಿ ಗಿಡಗಳನ್ನು ನೆಡುವ ಮೂಲಕ ಪರಿಸರ ವ್ಯವಸ್ಥೆಯನ್ನು ಪುನರ್ ಸ್ಥಾಪಿಸೋಣ.
* ಪರಿಸರವು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆ ಎಂಬುದನ್ನು ಅರಿಯೋಣ.
* ಪರಿಸರಕ್ಕೆ ಹಾನಿಯಾದರೆ ನಮಗೇ ಹಾನಿಯಾದಂತೆ ಎಂದು ಅರ್ಥೈಸಿಕೊಳ್ಳೋಣ.
* ರಾಸಾಯನಿಕ ಹಾಗೂ ಪ್ಲಾಸ್ಟಿಕ್ ಬಳಕೆ ಮಿತಗೊಳಿಸೋಣ.
* ನಮ್ಮೊಬ್ಬರಿಂದ ಇದೆಲ್ಲಾ ಸರಿಹೋಗುತ್ತಾ… ಎಂಬ ಅಸಡ್ಡೆ, ಅಲಕ್ಷ್ಯ ಭಾವವನ್ನು ದೂರ ಮಾಡೋಣ.
ಏನೇ ಆಗಲಿ ಈ ದಿನದ ಮಹತ್ವ ಅರಿತು ಹೊಸತೊಂದು ಅರ್ಥ ನೀಡೋಣ, ಸಂಕಲ್ಪ ಮಾಡೋಣ, ಸಾಫಲ್ಯ ಹೊಂದೋಣ.
ಶ್ರೀಮತಿ ಉಷಾ ಈ.
ಕನ್ನಡ ಉಪನ್ಯಾಸಕರು, ದಾವಣಗೆರೆ.