ಹರಿಹರ, ಮೇ 30 – ತಾಲ್ಲೂಕಿನ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ 64 ಪ್ರೌಢ ಶಾಲೆಗಳು ಮತ್ತು ಪ್ರಾಥಮಿಕ 227 ಶಾಲೆಗಳು ಇವೆ. ಶಾಲೆಯ ಮಕ್ಕಳಿಗೆ ಉಚಿತ ಸಮವಸ್ತ್ರ ಸೇರಿದಂತೆ, ಸೌಲಭ್ಯಗಳ ವಿತರಣೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ತಿಳಿಸಿದರು.
ನಗರದ ಹೊರವಲಯದ ಸಾಲಕಟ್ಟೆ, ಶ್ರೀನಿವಾಸ್ ಕ್ಯಾಂಪ್ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಣೆ ಮಾಡಿ ಮಾತನಾಡಿದರು. ಬಡ ಮಕ್ಕಳಿಗೆ ಸರ್ಕಾರ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಊಟ, ಹಾಲು, ಹಣ್ಣು ಸೇರಿದಂತೆ ಹಲವಾರು ಬಗೆಯ ಸೌಲಭ್ಯಗಳನ್ನು ಒದಗಿಸು ತ್ತದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಮುಂದಿನ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲಿ ಎಂದರು.